ಫಾಜಿಲ್ ಕೊಲೆ ಪ್ರಕರಣ – ಹತ್ಯೆಗೆ ಬಳಸಿದ ಕಾರು ಓನರ್ ಪೊಲೀಸ್ ವಶಕ್ಕೆ..
ಮಂಗಳೂರು – ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಬಳಸಿದ್ದ ಕಾರ್ ಮಾಲಿಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕಾರ್ ಮಾಲೀಕ ಅಜಿತ್ ಡಿಸೋಜಾ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅಜಿತ್ ವೈಟ್ ಬೋರ್ಡ್ ಕಾರ್ ಗಳನ್ನು ಬಾಡಿಗೆ ನೀಡುವ ಕೆಲಸ ಮಾಡಿಕೊಂಡಿದ್ದು, ಇವರ ಬಳಿಯೇ ಹಂತಕರು ಕಾರ್ ಬಾಡಿಗೆಗೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಅಜಿತ್ ಡಿಸೋಜಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಂಜಾಗ್ರತ ಕ್ರಮವಾಗಿ ಸುರತ್ಕಲ್ ಚೊಕ್ಕಬೆಟ್ಟುವಿನಲ್ಲಿರುವ ಅಜಿತ್ ಡಿಸೋಜಾ ನಿವಾಸಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಅಜಿತ್ ನೀಡುವ ಮಾಹಿತಿಯನ್ನಾಧರಿಸಿ ಪೊಲೀಸರು ಹಂತಕರಿಗೆ ಬಲೆ ಬೀಸಿದ್ದಾರೆ.
ಫಾಜಿಲ್ ಕೊಲೆ ಪ್ರಕರಣ ಸಂಬಂಧ ಯಾರ ಬಂಧನವೂ ಆಗಿಲ್ಲ. ಯಾರೂ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ. ಸಂಶಯದ ಹಿನ್ನಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿಗಳು ದುಷ್ಕರ್ತ್ಯಕ್ಕೆ ಹ್ಯುಂಡೈ ಇಯಾನ್ ಕಾರ್ ಬಳಸಿದ್ದರು. ಈ ಹಿನ್ನೆಲೆ ಮಂಗಳೂರು ಭಾಗದಲ್ಲಿರುವ ಇಯಾನ್ ಕಾರುಗಳ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ ಪೊಲೀಸರು ಸಂಶಯಾಸ್ಪದವಾಗಿ ಕಂಡು ಬಂದ ಬಿಳಿ ಬಣ್ಣದ ಏಳು ಇಯಾನ್ ಕಾರುಗಳ ಮಾಲಿಕರನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.








