ಮೆಂತ್ಯ ಬೀಜಗಳು ಪೋಷಕಾಂಶಗಳಿಂದ ತುಂಬಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ನೈಸರ್ಗಿಕ ಪದಾರ್ಥವಾಗಿದೆ. ವಿವಿಧ ಅಧ್ಯಯನಗಳ ಪ್ರಕಾರ, ಮೆಂತ್ಯ ಬೀಜವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಬೆಳಿಗ್ಗೆ ಚುರುಕಾಗಿರಲು ಮೆಂತ್ಯ ಚಹಾ ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮ್ಮ ದೇಹವನ್ನು ಚುರುಕಾಗಿರಿಸಲು ಸಹಕಾರಿಯಾಗಿದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಮೆಂತ್ಯ ಚಹಾ ತಯಾರಿಸುವ ವಿಧಾನ:
1. 1 ಚಮಚ ಮೆಂತ್ಯ ಬೀಜ
2. 1 ಕಪ್ ನೀರು
3. ಸುವಾಸನೆಗಾಗಿ ಜೇನು ಅಥವಾ ಲಿಂಬೆ ರಸ
ವಿಧಾನ:
1. ಮೆಂತ್ಯ ಬೀಜಗಳನ್ನು ಜಜ್ಜಿ ಹುಡಿ ಮಾಡಿ. ಇದರಿಂದ ಅದರಲ್ಲಿರುವ ನ್ಯೂಟ್ರಿಯಂಟ್ಸ್ ಹಾಗೂ ಸುವಾಸನೆ ಹೊರಬರುತ್ತದೆ.
2. ಸಾಸ್‌ಪ್ಯಾನ್‌ನಲ್ಲಿ ನೀರು ಬಿಸಿ ಮಾಡಿ.
3. ಜಜ್ಜಿದ ಮೆಂತ್ಯ ಬೀಜವನ್ನು ಕುದಿಯುತ್ತಿರುವ ನೀರಿಗೆ ಹಾಕಿ.
4. 5 ರಿಂದ 10 ನಿಮಿಷ ಗ್ಯಾಸ್ ಅನ್ನು simmer ಮಾಡಿಕೊಳ್ಳಿ.
5. ಚಹಾವನ್ನು ಸ್ಟ್ರೇನರ್‌ನಿಂದ ಶೋಧಿಸಿ.
6. ಸುವಾಸನೆ ಹಾಗೂ ರುಚಿಗಾಗಿ ಜೇನು ಅಥವಾ ಲಿಂಬೆ ರಸವನ್ನು ಸೇರಿಸಿ.
ಅದ್ಭುತ ಆರೋಗ್ಯ ಪ್ರಯೋಜನಗಳು:
1. ತ್ವಚೆ ಆರೋಗ್ಯಕ್ಕೆ:
ಮೆಂತ್ಯ ಬೀಜಗಳು ಉತ್ತಮ ತ್ವಚೆಯ ಆರೋಗ್ಯಕ್ಕಾಗಿ ಅಗತ್ಯವಿರುವ ನಿರೋಧಕಗಳನ್ನು ಹೊಂದಿವೆ. ಇದು ಮೊಡವೆ, ಕಲೆಯನ್ನು ತೆಗೆದು ತ್ವಚೆಯ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
2. ತೂಕ ಇಳಿಸಲು ಪ್ರಯೋಜನಕಾರಿ:
ಮೆಂತ್ಯ ಚಹಾ ತೂಕ ಇಳಿಸಲು ಉತ್ತಮ ಸಹಾಯಕವಾಗಿದೆ. ಇದು ಹಸಿವನ್ನು ಕಡಿಮೆ ಮಾಡಿ, ಕ್ರೇವಿಂಗ್ಸ್ ಅನ್ನು ತಡೆಯುತ್ತದೆ ಮತ್ತು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
3. ಜೀರ್ಣಕ್ರಿಯೆಗೆ ಸಹಕಾರಿ:
ಮೆಂತ್ಯ ಚಹಾ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸಿ, ಹೊಟ್ಟೆಯ ಉಬ್ಬರ, ಆಸಿಡಿಟಿ ಹಾಗೂ ಮಲಬದ್ಧತೆಗಳನ್ನು ತಡೆಯುತ್ತದೆ.
4. ರಕ್ತದ ಸಕ್ಕರೆ ನಿಯಂತ್ರಣ:
ಮೆಂತ್ಯ ಚಹಾ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯಕವಾಗಿದೆ. ಇದರಲ್ಲಿ ಇರುವ ಫೈಬರ್ ಅಂಶವು ಸಕ್ಕರೆ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ, ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
5. ಡಿಟಾಕ್ಸಿಫಿಕೇಶನ್:
ಮೆಂತ್ಯ ಬೀಜಗಳು ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ. ಇದರ ಆಂಟಿ ಆಕ್ಸಿಡೆಂಟ್ ಅಂಶಗಳು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆಂತರಿಕವಾಗಿ ವಿಷಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತವೆ.
ಮೆಂತ್ಯ ಚಹಾ: ನಿಮ್ಮ ದೇಹ ಮತ್ತು ಮನಸ್ಸಿಗೆ ಪ್ರೇರಣೆ..
ಅದರಲ್ಲಿರುವ ಅನೇಕ ಪೋಷಕಾಂಶಗಳು ಮತ್ತು ಆರೋಗ್ಯಕರ ಗುಣಗಳಿಂದ ಈ ಚಹಾವನ್ನು ಪ್ರತಿದಿನ ಸೇವಿಸಿದರೆ ನಿಮ್ಮ ದೇಹವನ್ನು ಚುರುಕಾಗಿರಿಸಿ, ಆರೋಗ್ಯವನ್ನು ಉತ್ತಮಗೊಳಿಸುತ್ತದೆ.








