ಹಬ್ಬದ ಹಿನ್ನೆಲೆ – ಅಕ್ಟೋಬರ್ 15 ರಿಂದ ನವೆಂಬರ್ 30 ರವರೆಗೆ 200 ವಿಶೇಷ ರೈಲು
ಹೊಸದಿಲ್ಲಿ, ಅಕ್ಟೋಬರ್02: ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಅಕ್ಟೋಬರ್ 15 ರಿಂದ ನವೆಂಬರ್ 30 ರ ನಡುವೆ 200 ವಿಶೇಷ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಯೋಜಿಸಿದೆ. ನಾವು ವಲಯಗಳ ಸಾಮಾನ್ಯ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ್ದೇವೆ. ಸ್ಥಳೀಯ ಆಡಳಿತದೊಂದಿಗೆ ಮಾತನಾಡಲು ಮತ್ತು ಕೊರೋನವೈರಸ್ ಸ್ಥಿತಿಯನ್ನು ಪರಿಶೀಲಿಸುವಂತೆ ಅವರಿಗೆ ಸೂಚನೆ ನೀಡಿದ್ದೇವೆ. ನಮಗೆ ವರದಿಯನ್ನು ನೀಡುವಂತೆ ಅವರನ್ನು ಕೇಳಲಾಗಿದೆ. ನಂತರ ಎಷ್ಟು ರೈಲುಗಳನ್ನು ಪರಿಚಯಿಸಬಹುದು ಎಂಬುದನ್ನು ನಾವು ನಿರ್ಧರಿಸುತ್ತೇವೆ . ಈಗಿನ ಅಂದಾಜಿನ ಪ್ರಕಾರ ನಾವು ಸುಮಾರು 200 ರೈಲುಗಳನ್ನು ಓಡಿಸುತ್ತೇವೆ. ಆದರೆ ಇದು ಒಂದು ಅಂದಾಜು, ಸಂಖ್ಯೆ ಹೆಚ್ಚು ಇರಬಹುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ವಿ ಕೆ ಯಾದವ್ ಅವರು ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಸಮುದ್ರದಲ್ಲಿ ಈಜುತ್ತಾ ಪತ್ತೆ
ಪ್ರಯಾಣಿಕರ ರೈಲುಗಳಿಗೆ ಸಂಬಂಧಿಸಿದಂತೆ, ನಾವು ರೈಲುಗಳ ಅವಶ್ಯಕತೆಗಳು, ಸಂಚಾರ ಮಾದರಿಗಳು ಮತ್ತು ಕೊರೋನಾ ಸ್ಥಿತಿಯನ್ನು ಪ್ರತಿದಿನವೂ ವಿಶ್ಲೇಷಿಸುತ್ತೇವೆ. ಅಗತ್ಯವಿರುವ ಕಡೆ ನಾವು ರೈಲುಗಳನ್ನು ಓಡಿಸುತ್ತೇವೆ ಎಂದು ಅವರು ಹೇಳಿದರು.
ನಾವು ಕ್ಲೋನ್ ರೈಲುಗಳ ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ಅಲ್ಲಿ ನಾವು ಪ್ರತಿದಿನ ಬೆಳಿಗ್ಗೆ ರೈಲುಗಳ ಡೇಟಾವನ್ನು ಸಾಫ್ಟ್‌ವೇರ್ ಮೂಲಕ ವಿಶ್ಲೇಷಿಸುತ್ತೇವೆ ಮತ್ತು ಎಲ್ಲಿಯಾದರೂ ದೀರ್ಘವಾದ ಕಾಯುವಿಕೆ ಪಟ್ಟಿ(waiting list) ಇದ್ದರೆ, ಅಲ್ಲಿ ಕ್ಲೋನ್ ರೈಲು ಓಡುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಭಾರತ ಚುನಾವಣಾ ಆಯೋಗ (ಇಸಿಐ) : ಗ್ರೂಪ್ ಬಿ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕ್ಲೋನ್ ರೈಲು ಭರ್ತಿಯಾಗಿದ್ದು ವೇಟಿಂಗ್ ಲಿಸ್ಟ್ ಇದ್ದರೆ ಅದೇ ಮಾರ್ಗದಲ್ಲಿ ಮತ್ತೊಂದು ಕ್ಲೋನ್ ರೈಲನ್ನು ಓಡಿಸುವುದು ಎಂದು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ರೈಲ್ವೆ ಪ್ರಸ್ತುತ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲುಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಮಾರ್ಚ್ 22 ರಿಂದ ನಿಯಮಿತ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ 12 ರಂದು ದೆಹಲಿಯನ್ನು ದೇಶದ ವಿವಿಧ ಭಾಗಗಳೊಂದಿಗೆ ಸಂಪರ್ಕಿಸುವ 15 ಪ್ರೀಮಿಯಂ ರಾಜಧಾನಿ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಜೂನ್ 1 ರಂದು 100 ಜೋಡಿ ದೂರದ-ರೈಲುಗಳನ್ನು ಪ್ರಾರಂಭಿಸಿತು. ಸೆಪ್ಟೆಂಬರ್ 12 ರಂದು ಹೆಚ್ಚುವರಿಯಾಗಿ 80 ರೈಲುಗಳನ್ನು ಸಹ ಪ್ರಾರಂಭಿಸಿತು.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Tweets by SaakshaTv