ಡೆಬಿಟ್ ಕಾರ್ಡ್ ಬಳಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು
ಹೊಸದಿಲ್ಲಿ, ಜನವರಿ21: ನಿಮ್ಮ ಡೆಬಿಟ್ ಕಾರ್ಡ್‌ಗಳ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವಾಗ ಬಹಳಷ್ಟು ಜಾಗರೂಕತೆ ವಹಿಸಬೇಕಾಗುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಎಟಿಎಂಗಳಲ್ಲಿ ನಿಮ್ಮ ಪಿನ್ ಅಥವಾ ಪಾಸ್‌ವರ್ಡ್‌ಗಳನ್ನು ಬರೆಯದಿರುವುದು, ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಇತ್ಯಾದಿ ನಿಮ್ಮ ಕಾರ್ಡ್ ಬಳಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು .
ಆದಾಗ್ಯೂ, ಡೆಬಿಟ್ ಕಾರ್ಡ್ ಉಪಯೋಗಿಸುವಾಗ ಇನ್ನೂ ಕೆಲವು ವಿಷಯಗಳನ್ನು ನೀವು ನೆನಪಿನಲ್ಲಿಡಬೇಕು.
ಎಟಿಎಂಗಳಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ:
1. ಎಟಿಎಂ ಕೇಂದ್ರದೊಳಗೆ ಹಣವನ್ನು ಎಣಿಸಬಾರದು ಎಂದು ಸಾಮಾನ್ಯವಾಗಿ ಸಲಹೆ ನೀಡಲಾಗಿದ್ದರೂ, ಸ್ವಲ್ಪ ಎಚ್ಚರಿಕೆಯಿಂದ ಹಣವನ್ನು ಎಣಿಸಿಕೊಳ್ಳುವುದು ಒಳ್ಳೆಯದು.
ಈ ಹಿಂದೆ ಕೆಲವು ಎಟಿಎಂ ಬಳಕೆದಾರರು ತಾವು ಸೂಚಿಸಿದ ಹಣದ ಮೊತ್ತವನ್ನು ಎಟಿಎಂ ಯಂತ್ರ ವಿತರಿಸಿಲ್ಲ ಎಂದು ದೂರಿದ್ದರು. ಈ ರೀತಿ ಆದಾಗ ನೀವು ಚಿಂತಿಸಬೇಕಾಗಿಲ್ಲ ನೀವು ಕೂಡಲೇ ನಿಮ್ಮ ದೂರನ್ನು ಬ್ಯಾಂಕಿನಲ್ಲಿ ನೋಂದಾಯಿಸಬಹುದು ಮತ್ತು ಅವರು ನಿಮ್ಮ ಮೊತ್ತವನ್ನು ಹಿಂಪಡೆಯುತ್ತಾರೆ. ಆದರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಯಾವಾಗಲೂ ಸಹಾಯ ಮಾಡುತ್ತದೆ.
ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿ (ಡಿಎಲ್) ನವೀಕರಿಸಿ – ಇಲ್ಲಿದೆ ಮಾಹಿತಿ
2. ನಮ್ಮಲ್ಲಿ ಹಲವರು ವಹಿವಾಟನ್ನು ಮುಗಿಸಿದ ನಂತರ ಎಟಿಎಂನಿಂದ ಬೇಗನೆ ಹೊರಡುವ ಅಭ್ಯಾಸವನ್ನು ಹೊಂದಿದ್ದಾರೆ. ಆದಾಗ್ಯೂ, ವಹಿವಾಟು ಮುಗಿದ ನಂತರ ಯಾವಾಗಲೂ ‘ರದ್ದು ಬಟನ್’ ಒತ್ತಿ. ಇದನ್ನು ಮಾಡುವುದರಿಂದ, ನಿಮ್ಮ ನಂತರದ ವ್ಯಕ್ತಿಯು ನಿಮ್ಮ ವಹಿವಾಟಿನ ಬಗ್ಗೆ ಏನನ್ನೂ ತಿಳಿಯಲು ಸಾಧ್ಯವಾಗುವುದಿಲ್ಲ.
3. ನೀವು ಅನೇಕ ಬಾರಿ ಎಟಿಎಂ ಯಂತ್ರದ ಬಳಿ ಕೆಲವು ಜನರು ನಿಂತಿರುವುದನ್ನು ಗಮನಿಸಿರಬಹುದು.
ಅವರು ನಿಮ್ಮ ಬೆರಳಿನ ಚಲನೆಯ ಮುಖಾಂತರ ಟ್ರ್ಯಾಕ್ ಮಾಡಬಹುದು. ಆದ್ದರಿಂದ ಯಾವಾಗಲೂ ಎಟಿಎಂ ಪಾಸ್‌ವರ್ಡ್ ಕೀಗಳನ್ನು ಮತ್ತು ಎಟಿಎಂ ಯಂತ್ರ ಪರದೆಯನ್ನು ನಿಮ್ಮ ದೇಹದಿಂದ ಮರೆಮಾಡಿ. ವಹಿವಾಟುಗಳು ಬಹಳ ವೈಯಕ್ತಿಕವಾಗಿವೆ.
4. ನಿಮ್ಮ ಮಿನಿ ಸ್ಟೇಟ್ಮೆಂಟ್ ಬ್ಯಾಲೆನ್ಸ್ ಅನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಿ. ಇದು ಇತ್ತೀಚೆಗೆ ನೀವು ಎಷ್ಟು ವಹಿವಾಟು ನಡೆಸಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡುವುದಲ್ಲದೆ, ಗೊತ್ತಿಲ್ಲದ ಯಾವುದೇ ವಹಿವಾಟುಗಳನ್ನು ಪತ್ತೆಹಚ್ಚಲು ಸಹ ನಿಮಗೆ ಸಹಾಯ ಮಾಡುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

5. ಅಂತಿಮವಾಗಿ, ಉತ್ತಮ ಎಟಿಎಂ ಬಳಕೆದಾರರಾಗಿ, ಎಟಿಎಂ ಕೇಂದ್ರವನ್ನು ಹೆಚ್ಚು ಕಾಲ ಆಕ್ರಮಿಸಬೇಡಿ. ಇದು ಕಾರ್ಯನಿರತ ಪ್ರದೇಶವಾಗಿದ್ದರೆ, ಇತರರು ಕ್ಯೂನಲ್ಲಿ ಕಾಯುತ್ತಿರುತ್ತಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಸಿ ಬೆಳ್ಳುಳ್ಳಿಯನ್ನು ಬೆಚ್ಚಗಿನ ನೀರಿನ ಜೊತೆಗೆ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/LWUkjMOv18
— Saaksha TV (@SaakshaTv) January 20, 2021
ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳುhttps://t.co/LIJOVLAunp
— Saaksha TV (@SaakshaTv) January 20, 2021








