Fifa : ಅರ್ಜೆಂಟಿನಾಗೆ ಪೋಲೆಂಡ್ ಚಾಲೆಂಜ್..!!
ವಿಶ್ವಕಪ್ ಫುಟ್ಬಾಲ್ನ ಬಲಿಷ್ಠ ತಂಡ ಅರ್ಜೆಂಟಿನಾ ತಂಡ ಇಂದು ಡು ಆರ್ ಡೈ ಮ್ಯಾಚ್ನಲ್ಲಿ ಪೋಲೆಂಡ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಮೆಸ್ಸಿ ಪಡೆ ಗೆದ್ದರೆ ಮುಂದಿನ ಹಂತವನ್ನು ಖಚಿತಪಡಿಸಿಕೊಳ್ಳಲಿದೆ ಡ್ರಾ ಆದಲ್ಲಿ ಸೌದಿ ಅರೇಬಿಯಾ ತಂಡದ ಗೆಲುವನ್ನು ನೆಚ್ಚಿಕೊಳ್ಳಬೇಕಾಗುತ್ತದೆ.
ಕೊನೆಯ ವಿಶ್ವಕಪ್ ಆಡುತ್ತಿರುವ ನಾಯಕ ಲಿಯೊನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಆಗಿರುವುದರಿಂದ ಪೋಲೆಂಡ್ ವಿರುದ್ಧದ ಕದನ ಅಗ್ನಿ ಪರೀಕ್ಷೆಯಾಗಿದೆ.ಒಂದು ವೇಳೆ ಸೋತರೆ ಮೆಸ್ಸಿ ಅವರನ್ನು ಇನ್ನು ಯಾವತ್ತೂ ಅರ್ಜೆಂಟಿನಾ ಜೆರ್ಸಿಯಲ್ಲಿ ನೋಡಲು ಸಾಧ್ಯಯವಿಲ್ಲ.
ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 1-2 ಗೋಲಿನಿಂದ ಸೋತಿದ್ದ ಅರ್ಜೆಂಟಿನಾ ನಂತರ ಮೆಕ್ಸಿಕೊ ವಿರುದ್ಧ 2-0 ಗೋಲುಗಳಿಂದ ಗೆದ್ದು ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿತ್ತು.
ಈಗ ವಿಶ್ವಕಪ್ ಶುರುವಾಗಿದ ಎಂದು ಹೇಳುವ ಮೆಸ್ಸಿ ಮೂರನೆ ಪಂದ್ಯ ಆಡಲು ಸಜ್ಜಾಗಿದ್ದಾರೆ. ಈ ವರ್ಷ ಮೆಸ್ಸಿ 22 ಗೋಲುಗಳನ್ನು ಹೊಡೆದು ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಅರ್ಜೆಂಟಿನಾ ಕೋಚ್ ಲಿಯೊನೆಲ್ ಸ್ಕಾಲೊನಿ ಲಾಟಾರೊ ಮಾರ್ಟಿನ್ನೆಜ್ ಅವರನ್ನು ಕಣಕ್ಕಿಳಿಸಬೇಕೊ ಅಥವಾ ಜೂಲಿಯನ್ ಅಲ್ವರೆಜ್ ಅವರನ್ನು ಕಣಕ್ಕಿಳಿಸಿಬೇಕೊ ಅನ್ನೊದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಇನ್ನು ಪೋಲೆಂಡ್ ತಂಡ ನಾಲ್ಕು ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಡ್ರಾ ಸಾಸಿದ್ದ ಪೋಲೆಂಡ್ ನಂತರ ಸೌದಿ ಅರೇಬಿಯಾ ವಿರುದ್ಧ 2:0 ಗೋಲುಗಳಿಂದ ಗೆದ್ದುಕೊಂಡಿತು. ಅರ್ಜೆಂಟಿನಾ ವಿರುದ್ಧ ಇಂದು ಗೆದ್ದರೆ 16ರ ಹಂತದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ.
ತಂಡದ ತಾರಾ ಆಟಗಾರ ಲೆವಾನ್ಡವಸ್ಕಿ ಲಯದಲ್ಲಿದ್ದಾರೆ. ಅರ್ಜೆಂಟಿನಾಗೆ ಲೆವಾನ್ಡವಸ್ಕಿ ಭಯ ಇದೆ. ಮೆಸ್ಸಿಯನ್ನು ನಿಯಂತ್ರಿಸುವುದೇ ಪೋಲೆಂಡ್ಗೆ ದೊಡ್ಡ ಸವಾಲಾಗಿದೆ.