2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ( FIFA World Cup Qatar 2022 ) ಆತಿಥೇಯ ಕತಾರ್ (Qatar ) ಮತ್ತು ಈಕ್ವೆಡಾರ್ (Ecuador ) ನಡುವೆ ನಾಳೆ ಮೊದಲ ಪಂದ್ಯ

2022ರ ಫಿಫಾ ವಿಶ್ವಕಪ್ ( FIFA -2022 World Cup Qatar ) ಟೂರ್ನಿಯಲ್ಲಿ ನಾಳೆ ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ (Qatar ) ಮತ್ತು ಈಕ್ವೆಡಾರ್ (Ecuador ) ಭಾನುವಾರ ಅಲ್ ಬೇತ್ ಸ್ಟೇಡಿಯಂನಲ್ಲಿ ಎ ಬಣದ ಮೊದಲ ಪಂದ್ಯವಾಡಲಿದೆ. ಇದೆ ಮೊದಲ ಬಾರಿ ವಿಶ್ವಕಪ್ ಆಯೋಜಿಸಿದ ಕತಾರ್ಗೆ ಚೊಚ್ಚಲ ವಿಶ್ವಕಪ್ ತನ್ನ ತಾಯಿನೆಲದ ಬೆಂಬಲ ನಡುವೆ ಆಡುವ ಅವಕಾಶ ಸಿಕ್ಕಿದೆ . ಇದು ಆಟಗಾರರ ಮೇಲೆ ಪ್ರಭಾವ ಬೀಳುವುದಂತೂ ಸುಳ್ಳಲ್ಲ. ಇನ್ನು ಈಕ್ವೆಡಾರ್ ಕಳೆದ ನಾಲ್ಕು ಮ್ಯಾಚ್ ನಲ್ಲಿ ಒಂದರಲ್ಲಿ ಮಾತ್ರ ಜಯ ಗಳಿಸಿದ್ದು ಉಳಿದ ಪಂದ್ಯಗಳು ಡ್ರಾ ದಲ್ಲಿ ಅಂತ್ಯವಾಗಿದ್ದರೆ ಕತಾರ್ ಎಲ್ಲ ಮ್ಯಾಚ್ ಅನ್ನು ಜಯಗಳಿಸಿ ಆತ್ಮಬಲದಿಂದ ಬೀಗುತ್ತಿದೆ. ಈಗಾಗಲೇ ಆಟಗಾರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೊಡ ಕಂಡು ಬಂದಿದ್ದು ಫಿಕ್ಸಿಂಗ್ ಪೆಡಂಬೂತಕ್ಕೆ ಬಲಿಯಾಗದಿರಲಿ ಅನ್ನುವುದೇ ಕ್ರೀಡಾ ಪ್ರೇಮಿಗಳ ಆಶಯ . ಇನ್ನು ಈಕ್ವಾಡೋರ್ ಮತ್ತು ಕತಾರ್ ನಡುವೆ ಕಳೆದ ಮೂರೂ ಪಂದ್ಯದಲ್ಲಿ ಎರಡು ತಂಡಗಳು ತಲಾ ಒಂದು ಮ್ಯಾಚ್ ಜಯಗಳಿಸಿದ್ದು ಒಂದು ಮ್ಯಾಚ್ ಡ್ರಾದಲ್ಲಿ ಅಂತ್ಯವಾಗಿದೆ. ಈಕ್ವಾಡರ್ ನಾಲ್ಕನೇ ಬಾರಿ ವಿಶ್ವಕಪ್ ಆಡುತಿದ್ದು ಒಮ್ಮೆ ಮಾತ್ರ ಹದಿನಾರನೇ ಸುತ್ತಿಗೆ ಲಗ್ಗೆ ಇಟ್ಟಿತ್ತು.
The first match of the 2022 FIFA World Cup Qatar 2022 between the hosts Qatar and Ecuador tomorrow.








