ADVERTISEMENT
Friday, September 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

admin by admin
July 18, 2026
in Newsbeat, Sports, ಕ್ರೀಡೆ
fifa world cup trophy old and new

fifa world cup trophy old and new

Share on FacebookShare on TwitterShare on WhatsappShare on Telegram

ಈಕೆ ಅಂತಿಂಥ ಚೆಲುವೆಯಲ್ಲ..! ಶಿಲ್ಪಿಯ ಕೈಯಲ್ಲಿ ಅರಳಿದ ಅಪ್ರತಿಮ ರೂಪಸಿ..! ಹೌದು, ಸರ್ವಾಧಿಕಾರಿ ಹಿಟ್ಲರ್‍ನ ಕೈ ಹಿಡಿಯಲಿಲ್ಲ. ಆಂಗ್ಲರ ಮೋಹದ ಬಲೆಗೂ ಬೀಳಲಿಲ್ಲ. ಕಳ್ಳರ ಕೈಗೆ ಸಿಲುಕಿದಾಗ ಸಾಕು ನಾಯಿಯ ಸಹಾಯದಿಂದ ತಪ್ಪಿಸಿಕೊಂಡು ಬಂದಿದ್ದ ಮಾಯಾವಿ..! ಸಾಂಬಾ ನೃತ್ಯದ ಆಟಕ್ಕೆ ಮರುಳಾಗಿ ಬ್ರೆಜಿಲ್‍ನಲ್ಲೇ ನೆಲೆಯೂರಿದ ಅಪ್ಸರೆ. ಕೊನೆಗೂ ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..! ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೋಹಿನಿ..!
ಇದು ಇಡೀ ಫುಟ್‍ಬಾಲ್ ಜಗತ್ತನ್ನು ಭಾವಪರವಶವನ್ನಾಗಿಸುವ ಮಾಯಾಂಗನೆಯ ರೋಚಕ ಕಥೆ..!
….
ಕೈಯಲ್ಲಿ ದುಡ್ಡಿಲ್ಲ. ಬ್ರಿಟಿಷರ ಅಸಹಕಾರ. ಯೂರೋಪ್ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು. ಹೀಗಾಗಿ ಯಾರು ಕೂಡ ಚೊಚ್ಚಲ ಫಿಫಾ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲು ಧೈರ್ಯ ಮಾಡಿರಲಿಲ್ಲ.

ಬ್ರಿಟಿಷರ ಹಂಗಿಲ್ಲದೆ ಫಿಫಾ ಟೂರ್ನಿ ಆಯೋಜನೆ..!

Related posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

September 18, 2026
ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

September 18, 2026

ಬ್ರಿಟನ್ ಸೇರಿದಂತೆ ಕೆಲವು ದೇಶಗಳಿಗೆ ಫಿಫಾ ಟೂರ್ನಿ ನಡೆಯುವುದು ಇಷ್ಟವಿರಲಿಲ್ಲ. ಫಿಫಾದಿಂದ ಹೊರಬಂದಿದ್ದ ಇಂಗ್ಲೆಂಡ್, ಟೂರ್ನಿಯಲ್ಲಿ ಆಡಬಾರದು ಅಂತ ಕೆಲವು ದೇಶಗಳಿಗೆ ಕಟ್ಟಪ್ಪಣೆಯನ್ನು ನೀಡಿತ್ತು. ಹೀಗಾಗಿ ಬಹುತೇಕ ಮಂದಿ ಅಂದುಕೊಂಡಿದ್ದರು. ಉರುಗ್ವೆ ಫಿಫಾ ವಿಶ್ವಕಪ್ ಟೂರ್ನಿ ಫ್ಲಾಫ್ ಶೋ ಅಂತ.

ಆದ್ರೆ ಜೂಲ್ಸ್ ರಿಮೆಟ್ ಎಂಬ ತ್ರಿವಿಕ್ರಮ ಪಟ್ಟು ಬಿಡಲಿಲ್ಲ. ಬ್ರಿಟಿಷರ ಸರ್ವಾಧಿಕಾರಿ ಧೋರಣೆಗೆ ಸಡ್ಡು ಹೊಡೆತು ನಿಂತ ಫ್ರಾನ್ಸ್ ನ ಜೂಲ್ಸ್ ರಿಮೆಟ್ ಇಟ್ಟ ಹೆಜ್ಜೆಯನ್ನು ಹಿಂಪಡೆಯಲಿಲ್ಲ. ಯಾಕಂದ್ರೆ ಇಂದಲ್ಲ.. ನಾಳೆಯದ್ರೂ ಫಿಫಾ ವಿಶ್ವಕಪ್ ಜನಪ್ರಿಯತೆ ಪಡೆದೇ ಪಡೆದುಕೊಳ್ಳುತ್ತೆ ಅನ್ನೋ ಅಚಲ ವಿಶ್ವಾಸ ರಿಮೆಟ್‍ಗಿತ್ತು.

ಪ್ರತಿಷ್ಠಿತ ಫಿಫಾ ಟೂರ್ನಿಯನ್ನು ಘೋಷಣೆ ಮಾಡಿದ್ದ ಜೂಲ್ಸ್ ರಿಮೆಟ್, ಆರ್ಥಿಕ ಸಮಸ್ಯೆ ಇದ್ರೂ ಯಾವುದರಲ್ಲೂ ರಾಜಿಯಾಗಿರಲಿಲ್ಲ. ಟೂರ್ನಿಯನ್ನು ಅದ್ದೂರಿಯಾಗಿ ಸಂಘಟಿಸಬೇಕು. ಈ ಮೂಲಕ ಬ್ರಿಟಿಷರಿಗೆ ತಕ್ಕ ಉತ್ತರ ನೀಡಬೇಕು ಎಂಬುದು ಆತನ ಮುಖ್ಯ ಉದ್ದೇಶವಾಗಿತ್ತು.

ರಿಮೆಟ್ ಕನಸನ್ನು ಸಾಕಾರಗೊಳಿಸಿದ್ದ ಉರುಗ್ವೆ..!

13 ತಂಡಗಳು ಭಾಗವಹಿಸಿದ್ದ ಚೊಚ್ಚಲ ವಿಶ್ವಕಪ್ ಟೂರ್ನಿಗೆ ಉರುಗ್ವೆ ಆತಿಥ್ಯ ವಹಿಸಿತ್ತ್ರು ಟ್ರೋಫಿ, ಆಟಗಾರರ ಪ್ರಯಾಣ ಸೇರಿದಂತೆ ಇಡೀ ಟೂರ್ನಿಯ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಸ್ವಾತಂತ್ರ್ಯದ ನೂರರ ಸಂಭ್ರಮದಲ್ಲಿದ್ದ ಉರುಗ್ವೆಗೆ ತಮ್ಮ ಶಕ್ತಿ ಏನು ಎಂಬುದನ್ನು ಜಗತ್ತಿಗೆ ತೋರಿಸಬೇಕಿತ್ತು.

ಫಿಫಾ ಮೋಹಿನಿಯ ಅಂದ ಹೆಚ್ಚಿಸಿದ್ದ ಗ್ರೀಕ್ ದೇವತೆ..!

ಆದ್ರೆ ಫಿಫಾ ವಿಶ್ವಕಪ್ ಟ್ರೋಫಿಯ ವಿನ್ಯಾಸದ ಆಯ್ಕೆಯ ಜವಾಬ್ದಾರಿಯನ್ನು ಜೂಲ್ಸ್ ರಿಮೆಟ್ ವಹಿಸಿಕೊಂಡಿದ್ದ. ಯಾಕಂದ್ರೆ ಕನಸಿನ ಫಿಫಾ ವಿಶ್ವಕಪ್ ಟ್ರೋಫಿ ವಿಶ್ವದ ಶ್ರೇಷ್ಠ ಕ್ರೀಡಾ ಟ್ರೋಫಿಯಾಗಿರಬೇಕು ಎಂಬುದು ಆತನ ಮಹಾದಾಸೆಯಾಗಿತ್ತು.

ಅದಕ್ಕಾಗಿಯೇ ಫ್ರಾನ್ಸ್ ನ ಖ್ಯಾತ ಚಿನ್ನದ ಶಿಲ್ಪಿ ಅಬೆಲ್ ಲಾಫ್ಲೂರ್ ಅವನಿಗೆ ಟ್ರೋಫಿಯನ್ನು ವಿನ್ಯಾಸ ಮಾಡುವ ಜವಾಬ್ದಾರಿಯನ್ನು ನೀಡಿದ್ದ. ಗ್ರೀಕ್‍ನ ವಿಜಯ ದೇವತೇ ನೈಕ್ ಪ್ರತಿಮೆಯೇ ಚೊಚ್ಚಲ ಫಿಫಾ ವಿಶ್ವಕಪ್À ಟ್ರೋಫಿಯ ಹೆಮ್ಮೆಯ ಸಂಕೇತವಾಗಿತ್ತು.

35 ಸೆಂಟಿ ಮೀಟರ್ ಎತ್ತರ ಹಾಗೂ 3.8 ಕಿಲೋಗ್ರಾಮ್ ತೂಕವಿರುವ ಈ ಟ್ರೋಫಿಗೆ ಬೆಳ್ಳಿ ಮತ್ತು ಅಪ್ಪಟ ಚಿನ್ನದ ಲೇಪನ ಮಾಡಲಾಗಿತ್ತು. ಈ ಚಿನ್ನದ ಗೊಂಬೆಯನ್ನು ಲಪಿಸ್ ಲಾಜುಲಿ ಎಂಬ ಬೆಲೆ ಬಾಳುವ ನೀಲಿ ರತ್ನದ ಪೀಠದ ಮೇಲೆ ಕೂರಿಸಲಾಗಿತ್ತು. ಟ್ರೋಫಿಯ ಪೀಠದ ನಾಲ್ಕು ಬದಿಗಳಲ್ಲಿ 1930ರಿಂದ 1970ರವರೆಗೆ ಫಿಫಾ ವಿಶ್ವಕಪ್ ಗೆದ್ದ ದೇಶದ ಹೆಸರುಗಳನ್ನು ಬರೆಯುವ ಅವಕಾಶವಿತ್ತು. ಇದೇ ಟ್ರೋಫಿಯನ್ನು ರಿಮೆಟ್ ಚೊಚ್ಚಲ ವಿಶ್ವಕಪ್‍ನಲ್ಲಿ ಹಡಗಿನಲ್ಲಿ ಯಾರಿಗೂ ಗೊತ್ತಾಗದಂತೆ ತನ್ನ ಸೂಟ್‍ಕೇಸ್‍ನಲ್ಲಿಟ್ಟುಕೊಂಡು ಉರುಗ್ವೆಗೆ ತಲುಪಿದ್ದ.

1930ರಿಂದ 1946ರವರೆಗೆ (1942 ಮತ್ತು 1946ರಲ್ಲಿ ಟೂರ್ನಿ ನಡೆದಿರಲಿಲ್ಲ) ವಿಕ್ಟರಿ ಫಿಫಾ ವಿಶ್ವಕಪ್ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಆದ್ರೆ, 1946ರಿಂದ 1970ರವರೆಗೆ ಫಿಫಾ ವಿಶ್ವಕಪ್ ಟೂರ್ನಿಯನ್ನು ಜೂಲ್ಸ್ ರಿಮೆಟ್ ಫಿಫಾ ವಿಶ್ವಕಪ್ ಟ್ರೋಫಿ ಎಂದು ಮರುನಾಮಕರಣ ಮಾಡಲಾಗಿತ್ತು. ಯಾಕಂದ್ರೆ ಫಿಫಾ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಿದ್ದ ಜೂಲ್ಸ್ ರಿಮೆಟ್‍ಗೆ ಫಿಫಾ ವಿಶ್ವಕಪ್ ಟ್ರೋಫಿü ಗೌರವದ ಸಮರ್ಪಣೆಯಾಗಿತ್ತು.

ಹಿಟ್ಲರ್ ನ ಸೈನಿಕರ ಕೆಂಗಣ್ಣಿಗೆ ಬಿದ್ದಿದ್ದ ಫಿಫಾ ಚೆಲುವೆ..!

ಮೊದಲ ಮೂರು ಫಿಫಾ ವಿಶ್ವಕಪ್ ಟೂರ್ನಿ ಸುಸೂತ್ರವಾಗಿ ನಡೆಯಿತ್ತು. ಆದ್ರೆ ನಂತರ ಶುರುವಾಗಿದ್ದು ಎರಡನೇ ಮಹಾಯದ್ದದ ಆತಂಕ. ಅದು ಬರೀ ಆತಂಕ ಮಾತ್ರ ಆಗಿರಲಿಲ್ಲ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ನಾಜಿ ಸೈನಿಕರಿಗೆ ಫಿಫಾ ವಿಕ್ಟರಿ ಟ್ರೋಫಿಯ ಮೇಲೆ ಕಣ್ಣು ಬಿದ್ದಿತ್ತು.

ಆಗ ಫಿಫಾದ ಉಪಾಧ್ಯಕ್ಷನಾಗಿದ್ದ ಇಟಲಿಯ ಒಟ್ಟೊರಿನೊ ಬ್ಯಾರಸ್ಸಿ, ಫಿಫಾ ಟ್ರೋಫಿಯನ್ನು ರೋಮ್‍ನ ಲಾಕರ್‍ನಿಂದ ತಂದು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ. ಟ್ರೋಫಿಯನ್ನು ಒಂದು ಬಾಕ್ಸ್‍ನಲ್ಲಿ ಪ್ಯಾಕ್ ಮಾಡಿ 2ನೇ ಮಹಾಯುದ್ಧ ಮುಗಿಯುವ ತನಕ ತನ್ನ ಮಂಚದ ಕೆಳಗಡೆ ಇಟ್ಟುಕೊಂಡು ಕಾಪಾಡಿದ್ದ.

ಚಿನ್ನದ ಗೊಂಬೆಯ ಮೇಲೆ ಕಳ್ಳರ ಕಣ್ಣು.. ಪತ್ತೆದಾರಿಯಾದ ಸಾಕು ನಾಯಿ..!

1966ರ ಫಿಫಾ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. ಟೂರ್ನಿ ನಡೆಯುವ ನಾಲ್ಕು ತಿಂಗಳ ಮುನ್ನ ಫಿಫಾ ಟ್ರೋಫಿ ಕಳ್ಳರ ಪಾಲಾಗಿತ್ತು. ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಆಗ ಇಂಗ್ಲೆಂಡ್ ಟ್ರೋಫಿ ಕದ್ದ ಕಳ್ಳರನ್ನು ಹಿಡಿಯಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಕೊನೆಗೆ ಪಿಕ್ಕಲ್ಸ್ ಎಂಬ ಸಾಕು ನಾಯಿ ವಿಕ್ಟರಿ ಟ್ರೋಫಿಯನ್ನು ಲಂಡನ್ ನಗರದ ಪೊದೆಯಲ್ಲಿ ಕಂಡು ಹಿಡಿದು ಇತಿಹಾಸ ಸೃಷ್ಟಿಸಿತ್ತು. ಕೆಲವು ವರ್ಷಗಳ ನಂತರ ಸತ್ತು ಹೋದ ಈ ಸಾಕುÀ ನಾಯಿಯ ಕೊರಳ ಪಟ್ಟಿ ಮ್ಯಾಂಚೆಂಸ್ಟರ್ ನಲ್ಲಿರುವ ನ್ಯಾಷನಲ್ ಫುಟ್‍ಬಾಲ್ ಮ್ಯೂಸಿಯಂ ಸೇರಿಕೊಂಡಿತ್ತು.

ಲೂಟಿಕೋರರ ದಾಳಿಗೆ ನಲುಗಿ ಹೋದ ಫಿಫಾ ಸುಂದ್ರಿ..!

ಫಿಫಾ ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಬ್ರೆಜಿಲ್ ಶಾಶ್ವತವಾಗಿ ಟ್ರೋಫಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಅದು ಫಿಫಾದ ನಿಯಮ ಕೂಡ ಆಗಿತ್ತು. ಆದ್ರೆ ಆ ಟ್ರೋಫಿಯನ್ನು ಉಳಿಸಿಕೊಳ್ಳುವ ಭಾಗ್ಯ ಬ್ರೆಜಿಲ್‍ಗೆ ಇರಲಿಲ್ಲ.

ಅದು ಡಿಸೆಂಬರ್ 19, 1983. ರಿಯೊ ಡಿ ಜನೈರೋದಲ್ಲಿರುವ ಬ್ರೆಜಿಲ್ ಫುಟ್‍ಬಾಲ್ ಕಚೇರಿಯಲ್ಲಿದ್ದ ಚಿನ್ನದ ಗೊಂಬೆ ಮತ್ತೆ ಕಳ್ಳರ ಪಾಲಾಗಿತ್ತು. ಇದು ಬ್ರೆಜಿಲ್‍ಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಕೊನೆಗೆ ಟ್ರೋಫಿ ಕದ್ದ ಕಳ್ಳರು ಸಿಕ್ಕಿದ್ರೂ ಟ್ರೋಫಿ ಮಾತ್ರ ಸಿಗಲಿಲ್ಲ.

ಉರುಗ್ವೆ ದೇಶದ ದುಡ್ಡು, ಜೂಲ್ಸ್ ರಿಮೆಟ್ ನ ಕನಸಿನ ಟ್ರೋಫಿ, ಬ್ರೆಜಿಲ್ ಆಟಗಾರು ತಮ್ಮ ಬೆವರ ಹನಿಗಳಿಂದ ದಕ್ಕಿಸಿಕೊಂಡಿದ್ದ ಚಿನ್ನದ ಲೇಪಿತ ಟ್ರೋಫಿಯನ್ನು ಕಳ್ಳರು ಕರಗಿಸಿ ಚಿನ್ನದ ಗಟ್ಟಿಯಾಗಿಸಿದ್ದರು. ಇತಿಹಾಸ ಪುಟ ಸೇರಿಕೊಂಡ ಈ ಟ್ರೋಫಿಯ ನಕಲಿ ಪ್ರತಿಯನ್ನು ಇಂದಿಗೂ ಬ್ರೆಜಿಲ್‍ನ ಮ್ಯೂಸಿಯಂನಲ್ಲಿ ನೋಡಬಹುದಾಗಿದೆ.

ಆಧುನಿಕ ಫಿಫಾ ವಿಶ್ವ ಟ್ರೋಫಿಯ ವಿಶೇಷತೆಗಳು..!

ವಿಕ್ಟರಿ ಜೂಲ್ಸ್ ರಿಮೆಟ್ ವಿಶ್ವಕಪ್ ಟ್ರೋಫಿ ಬ್ರೆಜಿಲ್‍ನ ವಶವಾದ ಬಳಿಕ ಫಿಫಾ ಹೊಸ ಟ್ರೋಫಿಯ ಅನ್ವೇಷನೆಗೆ ಮುಂದಾಗಿತ್ತು. ಏಳು ದೇಶಗಳ 53 ಶಿಲ್ಪಿಗಳು ಟ್ರೋಫಿಯ ವಿನ್ಯಾಸಗಳನ್ನು ಫಿಫಾಗೆ ಕಳುಹಿಸಿದ್ದರು. ಕೊನೆಗೆ ಆಯ್ಕೆಯಾಗಿದ್ದು, ಇಟೆಲಿಯ ಖ್ಯಾತ ಶಿಲ್ಪಿ ಸಿಲ್ವಿಯೊ ಗಜ್ಮಾನಿಗಾ ಅವರ ಅಮೋಘ ಕಲಾಕೃತಿ.

ಈ ಟ್ರೋಫಿಯನ್ನು 1974ರ ಜರ್ಮನಿ ವಿಶ್ವಕಪ್‍ನಲ್ಲಿ ಮೊದಲ ಬಾರಿ ಜಗತ್ತಿಗೆ ಪರಿಚಯಿಸಲಾಗಿತ್ತು. ವಿಶ್ವದ ಖ್ಯಾತ ನಾಮ ಆಟಗಾರರು ಇದೇ ಟ್ರೋಫಿಗೆ ಒಂದು ಬಾರಿ ಮುತ್ತಿಡಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದ್ರೆ ಈ ಟ್ರೋಫಿಯ ಪ್ರೀತಿ ಮತ್ತು ಸಿಹಿ ಮುತ್ತು ಕೆಲವರಿಗೆ ಮಾತ್ರ ಸಿಗುತ್ತಿದೆ. ಅವರೇ ಅದೃಷ್ಟವಂತರು. ಅವರೇ ಚಾಂಪಿಯನ್ನರು.

ಫಿಫಾ ವಿಶ್ವಕಪ್‍ನ ಟ್ರೋಫಿಯ ವಿನ್ಯಾಸ ಮತ್ತು ಗಾತ್ರ..!

ಅಂದ ಹಾಗೇ, ಆಧುನಿಕ ಫಿಫಾ ಟ್ರೋಫಿಯ ಎತ್ತರ 14.5 ಇಂಚು. 6.175 ಕಿಲೋಗ್ರಾಮ್ ತೂಕ. 18 ಕ್ಯಾರೆಟ್‍ನ ಶುದ್ಧ ಚಿನ್ನವಿದೆ. ಇಬ್ಬರು ಕ್ರೀಡಾಪಟುಗಳು ಭೂಮಂಡಲವನ್ನು ಮೇಲೆಕ್ಕೆ ಎತ್ತಿ ಹಿಡಿದಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದು ಏಕತೆ, ಸಾಧನೆ ಮತ್ತು ಫುಟ್‍ಬಾಲ್ ಆಟದ ಮಹತ್ವವನ್ನು ಬಿಂಬಿಸುತ್ತಿದೆ.ಟ್ರೋಫಿಯ ತಳಭಾಗದಲ್ಲಿ ಹಸಿರು ಬಣ್ಣದ ರತ್ನಗಳಿಂದ ಅಲಂಕರಿಸಲಾಗಿದೆ.

ಫಿಫಾ ಟ್ರೋಫಿ..! ಬೆಲೆ ಕಟ್ಟಲಾಗದ ಮಾಣಿಕ್ಯ..!

ಈ ಟ್ರೋಫಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ರೂ ಒಂದು ಅಂದಾಜಿನ ಪ್ರಕಾರ ಇದು 165ರಿಂದ 180 ಕೋಟಿಯ ಮೌಲ್ಯವನ್ನು ಹೊಂದಿದೆ. ಹಾಗೇ ಟ್ರೋಫಿಯಲ್ಲಿ 1974ರಿಂದ 2038ರ ಫಿಫಾ ವಿಶ್ವಕಪ್ ಗೆದ್ದ ತಂಡಗಳ ಹೆಸರನ್ನು ಬರೆಯಬಹುದು.

ಆದ್ರೆ ಮಿನುಗುವ ಈ ಟ್ರೋಫಿಯನ್ನು ಗೆದ್ದ ತಂಡಗಳು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಕೇವಲ ಸಂಭ್ರಮಾಚರಣೆಗೆ ಮಾತ್ರ ಈ ಟ್ರೋಫಿ ಮೀಸಲು. ಹಾಗೇ ಟ್ರೋಫಿಯನ್ನು ಬೇಕಾ ಬಿಟ್ಟಿ ಮುಟ್ಟುವ ಹಾಗಿಲ್ಲ. ಫಿಫಾ ವಿಶ್ವಕಪ್ ಗೆದ್ದ ಆಟಗಾರರು, ಮುಖ್ಯ ಕೋಚ್ ಹಾಗೂ ಟ್ರೋಫಿ ಹಸ್ತಾಂತರ ಮಾಡುವವರು ಮಾತ್ರ ಈ ಟ್ರೋಫಿಯನ್ನು ಸ್ಪರ್ಶ ಮಾಡಬಹುದು. ಇನ್ನುಳಿದಂತೆ, ವಿಶ್ವದ ನಾನಾ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿ ಸೇರಿದಂತೆ ಆಯ್ದ ಕೆಲವೇ ಕೆಲವು ಗಣ್ಯವ್ಯಕ್ತಿಗಳಿಗೆ ಮಾತ್ರ ಟ್ರೋಫಿಯನ್ನು ಮುಟ್ಟುವ ಅವಕಾಶವಿರುತ್ತದೆ.

ಶಾಶ್ವತವಾಗಿ ಯಾವ ದೇಶಕ್ಕೂ ಅಸಲಿ ಫಿಫಾ ಟ್ರೋಫಿ ಸಿಗಲ್ಲ..!

ಹಳೆಯ ಟ್ರೋಫಿ ಕಳ್ಳತನವಾದ ಕಾರಣ ಫಿಫಾ ತನ್ನ ನಿಯಮಗಳನ್ನು ಬದಲಾಯಿಸಿಕೊಂಡಿತ್ತು. ಈ ಹಿಂದೆ ಮೂರು ಬಾರಿ ಗೆದ್ದ ತಂಡಗಳಿಗೆ ಫಿಫಾ ಟ್ರೋಫಿಯನ್ನು ನೀಡಲಾಗುತ್ತಿತ್ತು. ಆದ್ರೆ ಈಗ ಹಾಗಿಲ್ಲ. ಫಿಫಾ ವಿಶ್ವಕಪ್‍ನ ಅಸಲಿ ಟ್ರೋಫಿ ಕೇವಲ ಸಂಭ್ರಮಾಚರಣೆಗೆ ಮಾತ್ರ ಮೀಸಲು. ಗೆದ್ದ ತಂಡಗಳಿಗೆ ಚಿನ್ನ ಲೇಪಿತ ಕಂಚಿನ ಟ್ರೋಫಿಯನ್ನು ನೀಡಲಾಗುತ್ತದೆ. ಆದ್ರೆ ಅಸಲಿ ಟ್ರೋಫಿ ಜ್ಯೂರಿಚ್‍ನ ಭದ್ರಕೋಟೆಯಲ್ಲಿ ಕಂಗೋಳಿಸುತ್ತಿರುತ್ತದೆ.

ಒಟ್ಟಿನಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಎಂಬ ಮಾಯಾಂಗನೆಯ ಚೆಲುವಿಗೆ ಮನಸೋಲದವರಿಲ್ಲ. ಹಿಟ್ಲರ್‍ನಿಂದ ಹಿಡಿದು ಕಳ್ಳರು ಕೂಡ ಈ ಟ್ರೋಫಿಯ ಮೇಲೆ ಕಣ್ಣು ಹಾಕಿದ್ದರು. ಅಷ್ಟೇ ಯಾಕೆ, ಇಂಗ್ಲೆಂಡ್‍ನವರು ಕೂಡ ಈ ಅಸಲಿ ಟ್ರೋಫಿಯನ್ನು ಅದಲು ಬದಲು ಮಾಡುವ ಪ್ರಯತ್ನ ನಡೆಸಿದ್ದರು. ಆದ್ರೆ ಮೈದಾನದಲ್ಲಿ ಅಪ್ರತಿಮ ಆಟವನ್ನಾಡಿ ಗೆಲ್ಲುವ ಆಟಗಾರರು ಮಾತ್ರ ಈ ಚೆಲುವೆಯನ್ನು ಮುದ್ದಾಡಬಹುದು..!
ಸನತ್ ರೈ

Tags: #FIFAWorldCup #FIFATrophy #JulesRimet #WorldCupHistory #Football #GoldenTrophy #sanathrai #saakshatv
ShareTweetSendShare
Join us on:

Related Posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

by Shwetha
September 18, 2026
0

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದಿಂದ ದೂರವಾಗಿರುವ ಬಂಡಾಯ ನಾಯಕರನ್ನು ಮತ್ತೆ ಮನೆಗೆ ಕರೆತರುವುದು ಅನಿವಾರ್ಯ ಎಂದು ಮಾಜಿ ಸಚಿವ ಮುರುಗೇಶ...

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

by Shwetha
September 18, 2026
0

ರಷ್ಯಾದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ...

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

by Shwetha
September 18, 2026
0

ಮೈಸೂರು: ಟಿ ನರಸೀಪುರದ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ನಡೆ ಈಗ ಇಡೀ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ತಾವು ನೀಡಿದ್ದ ವಿವಾದಾತ್ಮಕ...

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYC ಗಡುವು ವಿಸ್ತರಣೆ: ಅಕ್ಟೋಬರ್ 20ರವರೆಗೆ ಅವಕಾಶ, ನ್ಯಾಯಬೆಲೆ ಅಂಗಡಿ ಸಮಯವೂ ಬದಲಾವಣೆ

by Shwetha
September 18, 2026
0

ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗಳ e-KYC ಪೂರ್ಣಗೊಳಿಸಲು ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವನ್ನು...

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

by Shwetha
September 18, 2026
0

ಬೆಂಗಳೂರು: ರಾಜಕೀಯ ಅಖಾಡದಲ್ಲಿ ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದ ಸಿದ್ದರಾಮಯ್ಯನವರು ಇಂದು ಅತ್ಯಂತ ಭಾವುಕವಾಗಿ ಮತ್ತು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಈಗ ಎಷ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram