FIFA WorldCup : ಮೆರಡೋನ ದಾಖಲೆ ಮುರಿದ ಮೆಸ್ಸಿ
ವಿಶ್ವ ಫುಟ್ಬಾಲ್‌ನ ಸರ್ವಶ್ರೇಷ್ಠ ಆಟಗಾರ ಹಾಗೂ ಅರ್ಜೆಂಟಿನಾ ತಂಡದ ಪ್ರಮುಖ ಶಕ್ತಿಯಾಗಿರುವ ಲಿಯೊನೆಲ್ ಮೆಸ್ಸಿ, ತಮ್ಮದೇ ದೇಶದ ಮಾಜಿ ಆಟಗಾರ ಹಾಗೂ ಫುಟ್ಬಾಲ್ ಲೋಕದ ಮಹಾನ್ ಆಟಗಾರ ಡಿಯೇಗೊ ಮೆರಡೋನ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.
ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ 2022ರ ಫಿಫಾ ವಿಶ್ವಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ರಂಜಿಸುತ್ತಿರುವ ಮೆಸ್ಸಿ, ಅರ್ಜೆಂಟಿನಾ ತಂಡದ ಯಶಸ್ಸಿನ ಅಸ್ತ್ರವಾಗಿ ಮಿಂಚುತ್ತಿದ್ದಾರೆ.
ರೌಂಡ್ 16 ಹಂತದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ, ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಪಂದ್ಯದ 35ನೇ ನಿಮಿಷದಲ್ಲೇ ಗೋಲು ಬಾರಿಸಿದ ಮೆಸ್ಸಿ, ಆ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟಿನಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಈ ಗೋಲಿನ ಮೂಲಕ 35 ವರ್ಷದ ಲಿಯೊನೆಲ್ ಮೆಸ್ಸಿ, ಅರ್ಜೆಂಟಿನಾ ತಂಡದ ದಿಗ್ಗಜ ಆಟಗಾರ ಡಿಯೇಗೊ ಮೆರಡೋನ ಅವರ ದಾಖಲೆಯನ್ನ ಸರಿಗಟ್ಟಿದರು.
ಫುಟ್ಬಾಲ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲಿಯೊನೆಲ್ ಮಿಸ್ಸಿ, ಫುಟ್ಬಾಲ್ ವಿಶ್ವಕಪ್‌ನಲ್ಲಿ ತಮ್ಮ 8ನೇ ಗೋಲು ಬಾರಿಸಿದ್ದು, ಡಿಯೇಗೊ ಮೆರಡೋನ ಸಹ 8 ಗೋಲು ಬಾರಿಸಿದ ದಾಖಲೆ ಹೊಂದಿದ್ದರು.
ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಹೆಚ್ಚು ಗೋಲು ಬಾರಿಸಿರುವ ದಾಖಲೆ ಅರ್ಜೆಂಟಿನಾ ತಂಡದ ಮತ್ತೋರ್ವ ದಿಗ್ಗಜ ಆಟಗಾರ ಗೇಬ್ರಿಯಲ್ ಬಟಿಸ್ಟುಟಾ ಹೆಸರಿನಲ್ಲಿದೆ.
ಕಾಲ್ಚೆಂಡಿನ ಆಟದಲ್ಲಿ ತಮ್ಮ ಕಾಲ್ಚೆಳಕದಿಂದ ಮಿಂಚಿದ್ದ ಬಟಿಸ್ಟುಟಾ, ಫುಟ್ಬಾಲ್ ವಿಶ್ವಕಪ್‌ನಲ್ಲಿ 10 ಗೋಲುಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಮಿಂಚುತ್ತಿರುವ ಲಿಯೊನೆಲ್ ಮೆಸ್ಸಿ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಬಟಿಸ್ಟುಟಾ ದಾಖಲೆ ಬ್ರೇಕ್ ಮಾಡುವ ನಿರೀಕ್ಷೆ ಮೆಸ್ಸಿ ಅಭಿಮಾನಿಗಳಲ್ಲಿದೆ.