Fiffa Worldcup : Amrica – Wales : ಅಮರಿಕ – ವೇಲ್ಸ್ ನಡುವೆ ಟೈ
ಫಿಫಾ ವಿಶ್ವಕಪ್ನಲ್ಲಿ ಅಮರಿಕ ಹಾಗೂ ವೇಲ್ಸ್ ನಡುವಿನ ಪಂದ್ಯ 1-1 ಗೋಲುಗಳಂದ ಡ್ರಾನಲ್ಲಿ ಅಂತ್ಯ ಕಂಡಿದೆ. ಪಂದ್ಯ ಆರಂಭದಲ್ಲಿ ಅಮರಿಕ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 36ನೇ ನಿಮಿಷದಲ್ಲಿ ಟಿಮ್ ವೇಹ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು.
2ನೇ ಅವಧಿಯಲ್ಲಿ ಎಚ್ಚೆತ್ತ ವೇಲ್ಸ್ ಆಟಗಾರರು ಮರು ಹೋರಾಟ ನಡೆಸಿದರು. ಅಮೆರಿಕ ತಂಡ ಪ್ರತಿರೋಧವನ್ನು ದಿಟ್ಟವಾಗಿ ಎದುರಿಸಿತು. ಆದರೆ ಡಿಫೆಂಡರ್ ವಾಕರ್ ಜಿಮರ್ ಮನ್ ಮಾಡಿದ ತಪ್ಪು ವೇಲ್ಸ್ ಪೆನಾಲ್ಟಿ ಅವಕಾಶ ನೀಡಿತು.
ಇದರ ಲಾಭ ಪಡೆದ ವೇಲ್ಸ್ 82ನೇ ನಿಮಿಷದಲ್ಲಿ ಗೆರಾತ್ ಬೇಲ್ ಗೋಲು ಹೊಡೆದು ತಮಡವನ್ನು ಸೋಲಿನಿಂದ ಪಾರು ಮಾಡಿದರು. ಉಭಯ ತಂಡಗಳು ಡ್ರಾಗೆ ತೃಪ್ತಿಪಟ್ಟುಕೊಂಡವು. ಅಮರಿಕ ಗೆಲ್ಲಬೇಕಿದ್ದ ಪಂದ್ಯವನ್ನು ತಪ್ಪನಿಂದ ಗೆಲುವನ್ನು ಕೈಚೆಲ್ಲಿಕೊಂಡಿತು.