Fiffa World Cup : ಕ್ರೀಡಾಂಗಣದಲ್ಲಿ ಬಿಯರ್ ಮಾರಾಟಕ್ಕೆ ನಿರ್ಬಂಧ
ಗಲ್ಫ್ ರಾಷ್ಟ್ರ ಕತಾರ್ನಲ್ಲಿ ಫಿಫಾ ವಿಶ್ವಕಪ್ಗೆ ಕೌಂಟ್ ಡೌನ್ ಶುರುವಾಗಿದೆ. ಇದರ ಬೆನ್ನಲ್ಲೆ ಕ್ರೀಡಾಂಗಣದಲ್ಲಿ ಬಿಯರ್ ಮಾರಾಟಕ್ಕೆ ತಡೆಯಾಜ್ಞೆ ನೀಡಿದೆ.
ತಿಂಗಳ ಹಿಂದೆಯಷ್ಟೆ ಬಿಯರ್ ನೀಡುವುದಾಗಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಫಿಫಾ ಆಡಳಿತ ಸಂಸ್ಥೆ ಇದೀಗ ತನ್ನ ಮದ್ಯ ನೀತಿಯನ್ನು ಬದಲಿಸಿದೆ.
2010ರಲ್ಲಿ ಅತಿಥ್ಯದ ಹಕ್ಕು ಪಡೆಯುವಾಗ ಕತಾರ್ ಟೂರ್ನಿ ವೇಳೆ ಬಿಯರ್ ಮಾರಾಟಕ್ಕೆ ಒಪ್ಪಿಕೊಂಡಿತ್ತು. ನಂತರ ಮೊನ್ನೆ ಸೆಪ್ಟಂಬರ್ನಲ್ಲೂ ಫಿಫಾ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಬದ್ದ ಎಂದು ಹೇಳಿತ್ತು.
ಫಿಫಾ ಆಯೋಜಕರ ಮಾತುಕತೆ ನಡೆಸಿ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಕ್ರಮದಿಂದ ಬಿಯರ್ ಸಂಸ್ಥೆ ಬೆಲ್ಜಿಯಂ ಮೂಲದ ಎಬಿ-ಇನ್ಬೆವ್ 4 ಸಂಸ್ಥೆಗೆ ಭಾರೀ ನಷ್ಟ ಉಂಟಾಗಲಿದೆ ಎಂದು ತಿಳಿದು ಬಂದಿದೆ,
1985ರಿಂದ ಪ್ರಾಯೋಜತ್ವ ನೀಡುತ್ತಾ ಬಂದಿರುವ ಎಬಿ-ಇನ್ ಬೆವ್ 4 ಪ್ರತಿ ವರ್ಷ ಫಿಫಾಗೆ 75 ಮಿಲಿಯನ್ ಡಾಲರ್ ಪಾವತಿಸುತ್ತಾ ಬಂದಿದೆ.ಕತಾರ್ನ ನಿರ್ಧಾರದಿಂದ ಫಿಫಾ ಸಂಸ್ಥೆ ಹಣವನ್ನು ಹಿಂದಿರುಗಿಸಬಹುದಾಗಿದೆ.
Fiffa World Cup, beer selling ban in stadium – saakshatv








