Fiffa Worldcup : ಜರ್ಮನಿ ಮಣಿಸಿ ಅಪ್ಪರಿಸಿದ ಜಪಾನ್..!!
ದೋಹಾ: ಫಿಫಾ ವಿಶ್ವಕಪ್ನ ಆರಂಭದಲ್ಲೆ ಆಘಾತಕಾರಿ ಫಲಿತಾಂಶಗಳು ಹೊರ ಬಂದಿವೆ. ಇದೀಗ ನಾಲ್ಕು ಬಾರಿ ಚಾಂಪಿಯನ್ ಜರ್ಮನಿ ತಂಡವನ್ನು ದುರ್ಬಲ ಜಪಾನ್ ಸೋಲಿಸಿ ಶಾಕ್ ಕೊಟ್ಟಿದೆ.
ಬುಧವಾರ ಖಲೀಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ತಂಡ ಬಲಿಷ್ಠ ಜರ್ಮನಿ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ಪಡೆಯಿತು.
ಜರ್ಮನಿ ತಂಡ ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಪಂದ್ಯದ ಆರಂಭದಲ್ಲಿ ಜರ್ಮನಿ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು. ತಂಡದ ಮಿಡ್ಫೀಲ್ಡರ್ ಇಲಖಾಜ್ ಗಿನ್ಡೊ 33ನೇ ನಿಮಿಷದಲ್ಲಿ ಗೋಲು ಹೊಡೆದರು. ಮೊದಲ ಅವಧಿಯಲ್ಲಿ ಜರ್ಮನಿ 1-0 ಗೋಲಿನಿಂದ ಮುನ್ನಡೆ ಸಾಧಿಸಿತು.
ನಿರ್ಣಾಯಕ ಎರಡನೆ ಅವಧಿಯಲ್ಲಿ ಜಪಾನ್ ಪುಟಿದೆದ್ದು ಬಂದಿತ್ತು. ಬದಲಿ ಆಟಗಾರರನ್ನು ಕಣಕ್ಕಿಳಿಸಿ ಜರ್ಮನಿ ದಾಳಿ ಮಾಡಲು ಆರಂಭಿಸಿತು. ಇದರ ಫಲವಾಗಿಯೇ 75ನೇ ನಿಮಿಷದಲ್ಲಿ ಬದಲಿ ಆಟಗಾರ ರಿಸ್ತು ಡೋನ್ ಗೋಲು ಹೊಡೆದು ಸಮಗೊಳಿಸಿದರು.
ನಂತರ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. 83ನೇ ನಿಮಿಷದಲ್ಲಿ ಜಪಾನ್ ತಂಡದ ತಾಕುಮಾ ಆಸಾನೊ 83ನೇ ನಿಮಿಷದಲ್ಲಿ ಗೋಲು ಹೊಡೆದು ದೊಡ್ಡ ಆಘಾತ ನೀಡಿದರು.
ಈ ಆಘಾತದಿಂದ ಚೇತರಿಸಿಕೊಳ್ಳಲು ಜರ್ಮನಿ ಕೊನೆ ನಿಮಿಷದಲ್ಲಿ ಗೋಲು ಹೊಡೆಯಲು ಪ್ರಯತ್ನಿಸಿತಾದ್ದಾರೂ ಪ್ರಯೋಜನವಾಗಲಿಲ್ಲ.
ಅನಗತ್ಯ ದಾಖಲೆ ಬರೆದ ಜರ್ಮನಿ
ಜಪಾನ್ ವಿರುದ್ಧ ಸೋಲುವ ಮೂಲಕ ಪಿಫಾ ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಸತತ ಎರಡು ಬಾರಿ ಸೋತ ಮೊದಲ ತಂಡ ಅನಗತ್ಯ ದಾಖಲೆಯನ್ನು ಜರ್ಮನಿ ಬರೆಯಿತು. 2018ರ ವಿಶ್ವಕಪ್ನಲ್ಲಿ ಜರ್ಮನಿ ದಕ್ಷಿಣ ಕೊರಿಯಾ ವಿರುದ್ಧ ಸೋತಿತ್ತು.