UP Election – 5 ನೇ ಹಂತದ ಚುನಾವಣೆ. 3 ಗಂಟೆಯವರೆಗೆ ಕೇವಲ 46 % ಮತದಾನ
ಉತ್ತರ ಪ್ರದೇಶದಲ್ಲಿ ನಡೆಯುತ್ತಿರು ಐದನೇ ಹಂತದ ಚುನಾವಣೆಗೆ ಎಲ್ಲ ಪ್ರಮುಖ ಪಕ್ಷಗಳಿಗೂ ಹಿನ್ನಡೆಯಾಗಿದೆ. ಐದನೇ ಹಂತದಲ್ಲಿ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಅಮೇಥಿ, ರಾಯ್ಬರೇಲಿ, ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್, ಬಾರಾಬಂಕಿ, ಅಯೋಧ್ಯೆ, ಬಹ್ರೈಚ್, ಶ್ರಾವಸ್ತಿ ಮತ್ತು ಗೊಂಡಾ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.
ಈಭಾಗದಲ್ಲಿ 2017ರಲ್ಲಿ ಬಿಜೆಪಿ 47 ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದ್ದರೆ, ಅದರ ಮಿತ್ರ ಪಕ್ಷ ಅಪ್ನಾ ದಳ ಮೂರು ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ (ಎಸ್‌ಪಿ) ಐದು, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೂರು, ಕಾಂಗ್ರೆಸ್ ಎರಡು ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು.
5ನೇ ಹಂತದ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಿರ್ಣಾಯಕವಾಗಿದೆ. ಇದರಲ್ಲಿ ಅಯೋಧ್ಯೆ ಜಿಲ್ಲೆ ಸಹ ಒಳಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಮತದಾನದ ಅಪ್ಲಿಕೇಶನ್ ಪ್ರಕಾರ, ಮಧ್ಯಾಹ್ನ 3 ಗಂಟೆಯವರೆಗೆ 46.28 % ಮತದಾನ ನಡೆದಿದೆ.
ಅಮೇಥಿಯಲ್ಲಿ ಶೇ.46.35 ಮತದಾನವಾಗಿದ್ದರೆ, ಅಯೋಧ್ಯೆಯಲ್ಲಿ ಶೇ.50.60, ಬಹ್ರೈಚ್ ಶೇ.48.66, ಬಾರಾಬಂಕಿ ಶೇ.45.55, ಚಿತ್ರಕೂಟ ಶೇ.51.67, ಗೊಂಡ ಶೇ.46.706, ಕೌಶಂಬಿ ಶೇ.48.706, ಪ್ರತಾಪ್ 4.296, ಪ್ರತಾಪ್ 4.296 ಶೇ. 48.86, ಶ್ರಾವಸ್ತಿ ಶೇ.49.38 ಮತ್ತು ಸುಲ್ತಾನಪುರ ಶೇ.46.47. ಮತದಾನ ನಡೆದಿದೆ…