ಕೊರೊನಾ ವಿರುದ್ದ ದೇಶದ ಜನ ಹೇಗೆ ಹೋರಾಟ ನಡೆಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಮಾತನಾಡಿದ ಅವರು, ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿದೆ. ಅದರ ವಿರುದ್ದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹಾಗಾಗಿ ಮಾರ್ಚ್ 22 ರಂದು ಭಾನುವಾರ ಬೆಳ್ಳಿಗೆ 7 ರಿಂದ ರಾತ್ರಿ 9 ಗಂಟೆವರೆಗೂ ಜನತಾ ಕರ್ಫ್ಯೂ ನಡೆಸಲಾಗುತ್ತದೆ. ಈ ಜನತಾ ಕರ್ಫ್ಯೂಗೆ ದೇಶದ ಜನರು ಸಹಕರಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ಇದೆ ವೇಳೆ ಮಾತನಾಡಿ ಅವರು ಯುದ್ದಗಳು ನಡೆಯುವ ಸಮಯದಲ್ಲಿ ನಗರಗಳು ಬ್ಲಾಕ್ ಔಟ್ ಆಗುತ್ತಿದ್ದವು. ಅಲ್ಲದೆ ಭಾನುವಾರ ಮನೆಯಿಂದ ಹೊರಬರಬೇಡಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ಸಾಧ್ಯವಾದಷ್ಟು ಎಲ್ಲಾ ಕೆಲಸಗಳನ್ನು ಮನೆಯಲ್ಲೇ ಮಾಡಿ. ಮಾರ್ಚ್ 22 ರಂದು ನಡೆಯುವ ಜನತಾ ಕರ್ಫ್ಯೂ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಿ ಇದು ನನ್ನ ಅಗ್ರಹ.
ಕೊರೊನಾ ವಿರುದ್ದ ಈಗಾಗಲೇ ನಮ್ಮ ಸಿಬ್ಬಂದಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ರೈಲ್ವೆ ಸಿಬ್ಬಂದಿ, ಪೊಲೀಸ್ ಇಲಾಖೆ, ಸಾರಿಗೆ ಸಿಬ್ಬಂದಿ, ವೈದ್ಯರು, ನರ್ಸ್, ಮಾಧ್ಯಮ ಸಿಬ್ಬಂದಿಗಳು ಸೋಂಕು ಲೆಕ್ಕಿಸದೆ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಮಾರ್ಚ್ 22 ಭಾನುವಾರ ಸಂಜೆ 5 ಗಂಟೆ ಬಳಿಕ ಮನೆಗಳ ಕಿಟಿಕಿ, ಬಾಗಿಲು, ಬಾಲ್ಕನಿ ಬಳಿ ನಿಂತು ಚಪ್ಪಾಳೆ ಹೊಡೆಯೋ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಧನ್ಯವಾದ ಅರ್ಪಿಸೋಣ ಎಂದು ಪ್ರಧಾನಿ ತಿಳಿಸಿದರು. ಇದು ನನ್ನ ಮನವಿ ಮತ್ತು ಅಗ್ರಹ ಕೂಡ ಹೌದು ಎಂದು ಮೋದಿ ಹೇಳಿದ್ದಾರೆ.
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...








