ಗ್ರಾ.ಪಂ ಅಧ್ಯಕ್ಷೀಯ ಚುನಾವಣೆ ವೇಳೆ ಕೈ – ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ..!
ಯಾದಗಿರಿ : ಯಾದಗಿರಿಯಲ್ಲಿ ಗ್ರಾಮಪಂಚಾಯತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ 2ಕಡೆಗಳಿಂದ ಕಲ್ಲು ತೂರಾಟ ನಡೆದಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನೂ 4 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಕಾರಗಳು ಹಾಗೂ 30 ಕ್ಕೂ ಅಧಿಕ ಬೈಕ್ ಸಂಪರ್ಣ ಜಖಮ್ ಆಗಿವೆ ಎಂದು ಹೇಳಲಾಗಿದೆ. ಜಿಲ್ಲೆಯ ವಡಗೇರ ತಾಲೂಕಿನ ಉಳ್ಳೇಸುಗುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಳ್ಳೇಸುಗುರ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಅಭ್ರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಬಳಿಕ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಬಿಜೆಪಿ , ಕೈ ಕರ್ಯರ್ತರು ಕಲ್ಲು ಹಾಗೂ ಬಡಿಗೆಯಿಂದ ಪರಸ್ಪರ ಕಾದಾಡಿದ್ದಾರೆ. ಗಾಯಾಳುಗಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ ದಾನಿಯಾಗಿದ್ದರೂ ತಂದೆ ಮಗನಿಗೆ ಯಾವಗಲ್ಲೂ ವೈಮನಸ್ಸು ಜಗಳ..!!
ಚಾಲನಾ ಪರವಾನಗಿಯನ್ನು ಆನ್ಲೈನ್ನಲ್ಲಿ ಹೇಗೆ ನವೀಕರಿಸುವುದು? ಇಲ್ಲಿದೆ ಮಾಹಿತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








