2 ಗುಂಪುಗಳ ಮಧ್ಯೆ ಘರ್ಷಣೆ, ಓರ್ವ ಸಾವು
ಬೆಳಗಾವಿ: ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಓರ್ವ ಯುವಕ ಮೃತಪಟ್ಟಿದ್ದು, 7 ಜನ ಯುವಕರು ಗಾಯಗೊಂಡಿರುವ ಘಟನೆ ಬೆಳಗಾವಿ ತಾಕಲೂಕಿನ ಕರಡಿಗುದ್ದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಸುಣಕುಪ್ಪಿ ಗ್ರಾಮದ ಮುದುಕಪ್ಪ ಅಂಗಡಿ (25) ಮೃತ ದುರ್ದೈವಿ. 7ಜನ ಗಾಯಾಳುಗಳು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಗಂಬೀರವಾಗಿದೆ.
ಹಳೆ ವೈಷಮ್ಯದ ಹಿನ್ನಲೆಯಲ್ಲಿ ಎರಡುಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









