ಕ್ಷುಲ್ಲಕ ಕಾರಣಕ್ಕೆ ಎರಡು ವಿದ್ಯಾರ್ಥಿ ಗುಂಪುಗಳು ಮಾರಾಮಾರಿ dharwad saaksha tv
ಧಾರವಾಡ : ಎರಡು ವಿದ್ಯಾರ್ಥಿ ಗುಂಪುಗಳು ಇಬ್ಬರು ವಿದ್ಯಾರ್ಥಿಗಳನ್ನು ಮನಸೋಇಚ್ಛೆ ಥಳಿಸುತ್ತಿರುವ ವಿಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಧಾರವಾಡ ನಗರದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿ ಇಬ್ಬರು ಯುವಕರ ಮೇಲೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಲ್ಲೆ ಮಾಡಲಾಗುತ್ತಿದೆ.
ಬಸ್ ನಿಲ್ದಾಣದಲ್ಲಿಯೇ ವಿದ್ಯಾರ್ಥಿಗಳು ಪರಸ್ಪರ ಕಿತ್ತಾಡುತ್ತಿರೋದನ್ನು ಅಲ್ಲಿದ್ದವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಶಹರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.