ಪಾಕಿಸ್ತಾನ್ ಕ್ರಿಕೆಟ್ ಲೀಗ್ – ಕ್ಯಾಚ್ ಬಿಟ್ಟಿದ್ದಕ್ಕೆ ಸಹ ಆಟಗಾರನಿಗೆ ಕಪಾಳ ಮೋಕ್ಷ….
ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ತಮ್ಮ ಸಹ ಆಟಗಾರ ಕಮ್ರಾನ್ ಗುಲಾಮ್‌ಗೆ ಕಪಾಳಮೋಕ್ಷ ಮಾಡಿರು ಘಟನೆ ನಡೆದಿದೆ. ಹ್ಯಾರಿಸ್ ರೌಫ್ ಬೌಲಿಂಗ್ ನಲ್ಲಿ ಪೇಶಾವರ ಝಲ್ಮಿ ಓಪನರ್ ಹಜರತುಲ್ಲಾ ಜಝೈ ಹೊಡೆದ ಕ್ಯಾಚ್ ಅನ್ನು ಗುಲಾಮ್ ಕೈಬಿಟ್ಟಿದ್ದರು. ಇದಕ್ಕೆ ಹಾರಿಸ್ ಸಿಟ್ಟಿಗೆದ್ದರು.
ಓವರ್‌ನ ಕೊನೆಯ ಎಸೆತದಲ್ಲಿ ರೌಫ್ ಮೊಹಮ್ಮದ್ ಹ್ಯಾರಿಸ್ ಅವರನ್ನು ಔಟ್ ಮಾಡಿದರು. ಎಲ್ಲಾ ಆಟಗಾರರು ಸಂಭ್ರಮಾಚರಣೆಗೆ ಬಂದಾಗ, ರೌಫ್ ತನ್ನ ಕೋಪವನ್ನು ಹೊರಹಾಕಿ ಕಮ್ರಾನ್‌ಗೆ ಕಪಾಳಮೋಕ್ಷ ಮಾಡಿದನು. ಇದರ ನಂತರ ಕಮ್ರಾನ್ ಯಾವುದೇ ಪ್ರತಿಕ್ರಿಯೆ ನೀಡದೆ ನಗುತ್ತಿರುವಂತೆ ಕಂಡು ಬಂತು ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/i/status/1495771738554122242
ಪಂದ್ಯದ ವೇಳೆ ಕಮ್ರಾನ್ ಕೂಡ ತಮ್ಮ ಅದ್ಭುತ ಆಟದ ಮೂಲಕ ಹ್ಯಾರಿಸ್‌ಗೆ ಉತ್ತರಿಸಿದರು. ಅವರು 17ನೇ ಓವರ್‌ನಲ್ಲಿ ಪೇಶಾವರ ನಾಯಕ ವಹಾಬ್ ರಿಯಾಜ್ ಅವರನ್ನು ಔಟ್ ಮಾಡಿದರು. ಕಮ್ರಾನ್ ವಿಕೆಟ್ ಕಬಳಿಸಿ ಸಂಭ್ರಮಿಸುತ್ತಿದ್ದಾಗ ರೌಫ್ ಕೂಡ ಅವರನ್ನು ಅಪ್ಪಿಕೊಂಡರು. ಇದುವರೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹ್ಯಾರಿಸ್ ಮೇಲೆ ಕ್ರಮ ಕೈಗೊಂಡಿಲ್ಲ.








