ಭಾರತದಿಂದ ದೂರ ಆದ್ರೂ ಭಾರತದಂತೆಯೇ ಅನಿಸುತ್ತದೆ ಈ ದೇಶ.. ಇಲ್ಲಿ 77% ಗಿಂತ ಹೆಚ್ಚು ಹಿಂದೂಗಳಿದ್ಧಾರೆ.. ಇಲ್ಲಿನ ಅಧಿಕೃತ ಭಾಷೆ ಹಿಂದಿ…! ಫಿಜಿ : Amazing Facts
ಫಿಜಿ… ಭಾತರದಿಂದ ಬಹಳ ಬಹಳ ದೂರದಲ್ಲಿರುವ ಈ ಸುಂದರ ದ್ವೀಪ ರಾಷ್ಟ್ರ..
ಆದ್ರೆ ಇಲ್ಲಿನ ಅನೇಕ ವಿಚಾರಗಳು ರೀತಿ ರಿವಾಜುಗಳು , ಸಂಪ್ರದಾಯ ಪದ್ಧತಿಗಳು ಭಾರತದಂತೆಯೇ ಅನ್ನಿಸುತ್ತದೆ..
ಮುಖ್ಯವಾಗಿ ಈ ದೇಶದ ಭಾಷೆ.. ಹೌದು… ವಿಶೇಷ ಅಂದ್ರೆ ಈ ದೇಶದ ಅಧಿಕೃತ ಭಾಷೆ ಹಿಂದಿ..
ಅಷ್ಟೇ ಅಲ್ಲ ನಮ್ಮ ದೇಶದಂತೆಯೇ ಈ ದೇಶದಲ್ಲೂ ಕೂಡ ಯಾರು ಚಪ್ಪಲಿ ಧರಿಸಿ ಮನೆಯೊಳಗೆ ಪ್ರವೇಶಿಸುವುದಿಲ್ಲ. ಒಂದು ಕಾಲದಲ್ಲಿ ಈ ದೇಶ ಬ್ರಿಟೀಷ್ ಕಾಲೋನಿಯಾಗಿತ್ತು..
ಆದ್ರೆ ಸ್ವಾತಂತ್ರ್ಯ ಸಿಕ್ಕ ನಂತರ ಈ ದೇಶದ ಅನೇಕ ವಿಚಾರಗಳು ಬದಲಾಗಿವೆ.. ಈ ದೇಶದ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಫಿಜಿ ಇಲ್ಲಿನ ಒಟ್ಟಾರೆ ಜನಸಂಖ್ಯೆ ಸುಮಾರು 9 ಲಕ್ಷ 60 % ರಷ್ಟು ಜನ ನಗರಗಳಲ್ಲಿ ನೆಲೆಸಿದ್ರೆ 40 % ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ..
ಈ ದೇಶದ ಮತ್ತೊಂದು ವಿಶೇಷತೆ ಅಂದ್ರೆ ಇಡಡೀ ವಿಶ್ವಾದ್ಯಂತ ವಿಲುಪ್ತವಾಗಿರುವ ಅನೇಕ ಅಪರೂಪದ ಸಮುದ್ರಿ ಜೀವಿಗಳು ಇದೇ ದೇಶದಲ್ಲಿ ಕಾಣಲಿಕ್ಕೆ ಸಿಗುತ್ತದೆ..
ಇನ್ನೂ ಫಿಜಿಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.. ಇಲ್ಲ ಪ್ರತಿಯೊಬ್ಬರೂ ಸಹ ಸಾಲೆಗೆ ಹೋಗಲೇಬೇಕು.. ಸಾಮಾನ್ಯ ವಿದ್ಯಾಭ್ಯಾಸವನ್ನ ಹೊಂದಿರಲೇಬೇಕು..
ಇಲ್ಲಿನ ಲಿಟ್ರೆಸಿ ರೇಟ್ ಶೇ 100 ರಷ್ಟಿದೆ.. ಇಷ್ಟೆಲ್ಲಾ ವಿದ್ಯಾವಂತರೇ ಇದ್ರು ಈ ದೇಶದಲ್ಲಿ ಮೂಢನಂಬಿಕೆ ಹೆಚ್ಚಾಗಿ ತುಂಬಿಕೊಂಡಿದೆ.. ಇಲ್ಲಿ ನಮ್ಮ ದೇಶದಂತೆಯೇ ಕೆಲ ಮೌಢ್ಯಾಚಾರಣೆಗಳಿವೆ..
ಮುಖ್ಯವಾಗಿ ಯಾರದಾದ್ರೂ ಮನೆ ಮುಂದೆ ನಿಂಬೆ ಹಣ್ಣು ಬಿದ್ದಿದ್ರೂ ಇದನ್ನ ಅಶುಭ ಎಂದು ಅಲ್ಲಿನ ಅನೇಕ ಜನರು ಪರಿಗಣಿಸುತ್ಥಾರೆ.. ಅಷ್ಟೇ ಅಲ್ಲ ಮನೆಯಿಂದ ಆಚೆ ಹೋಗೋವಾಗ ಅಪ್ಪಿ ತಪ್ಪಿ ಸೀನು ಬಂದರೆ ಅಲ್ಲೇ ಕೆಲ ಸೆಕೆಂಡ್ ಗಳ ಕಾಲ ನಿಂತು ನಂತರ ಮುಂದುವರೆಯುತ್ತಾರೆ.. ಇಲ್ಲದೇ ಹೋದಲ್ಲಿ ಅದು ಅಶುಭ ಎಂದು ನಂಬುತ್ತಾರೆ..
ಇಲ್ಲಿ ಮೂರು ಅಧಿಕೃತ ಭಾಷೆಗಳನ್ನ ಮಾತನಾಡಲಾಗುತ್ತದೆ.. ಹಿಂದಿ, ಫಿಜಿಯನ್ , ಇಂಗ್ಲಿಷ್.. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಇಂಗ್ಲಿಷ್ ಹಾಗೂ ಹಿಂದಿಯನ್ನ ಆರಾಮಾಗಿ ಮಾತನಾಡ್ತಾರೆ..
ಇಲ್ಲಿ ಹಿಂದಿ ಮಾತನಾಡಲಾಗುತ್ತೆ ಅಂದ್ರೆ ಅನೇಕರಿಗೆ ಆಶ್ಚರ್ಯವಾಗುತ್ತೆ.. ಅಂದ್ಹಾಗೆ ಬ್ರಿಟೀಷ್ ಆಳ್ವಿಕೆಯ ಸಮಯದಲ್ಲಿ ಬ್ರಿಟೀಷರು ಸಾವಿರಾರು ಭಾರತೀಯರನ್ನ ಈ ದೇಶಕ್ಕೆ ಕಾಂಟ್ರ್ಯಾಕ್ಟ್ ಮೇಲೆ ಕರೆತಂದು ಕೂಲಿ ಕೆಲಸ ಮಾಡಿಸಿಕೊಳ್ತಿದ್ದರು ಎನ್ನಲಾಗಿದೆ..
ಆದ್ರೆ ಷರತ್ತನ್ನ ಕೂಡ ವಿಧಿಸಲಾಗಿತ್ತಂತೆ.. ಅಂದ್ರೆ 5 ವರ್ಷಗಳ ಕಾಲ ಫಿಜಿಯಲ್ಲೇ ಕೆಲಸ ಮಾಡಬೇಕು ನಂತರ ವಾಪಸ್ ಆಗಬಹುದು.. ಆದ್ರೆ ಅವರದ್ದೇ ಸ್ವಂತ ಖರ್ಚಿನಲ್ಲಿ ಎಂಬ ನಿಯಮವಿತ್ತಂತೆ..
ಅದು ಆಗದೇ ಹೋದ ಪಕ್ಷದಲ್ಲಿ ಮತ್ತೆ ಐದು ವರ್ಗಳ ಕಾಲ ಅಲ್ಲೇ ಕೆಲಸ ಮಾಡಬೇಕು… ಆಗ ಬ್ರಿಟೀಷರೇ ಹಡಗಿನ ಮೂಲಕ ಭಾರತಕ್ಕೆ ಅವರನ್ನ ವಾಪಸ್ ಕಳುಹಿಸಿಕೊಡುವುಸದಾಗಿ ಹೇಳಿದ್ದರಂತೆ..
ಹೀಗಾಗಿಯೇ ಅದೆಷ್ಟೋ ಸಾವಿರಾರು ಜನ ಭಾರತೀಯರು ಅಲ್ಲೇ ಉಳಿದುಕೊಂಡರು ಎನ್ನಲಾಗಿದೆ.. ನಂತರ 1920-30ರ ದಶಕದ ಸಮಯದಲ್ಲಿ ಮತ್ತಷ್ಟು ಪಭಾರತೀಯರು ಫಿಜಿಗೆ ಹೋಗಿ ಅಲ್ಲಿಯೇ ನೆಲೆಸಿದ್ರು ಎನ್ನಲಾಗಿದೆ..
ಹೀಗಾಗಿ ಅಲ್ಲಿ ಹಿಂದಿ ಮಾತನಾಡೋದು ಆಶ್ಚರ್ಯಕರವೇನಲ್ಲ.. ಫಿಜಿಯ ಫೇಮಸ್ ಡಿಶ್ ಕೊಕೊಡಾ, ರಾ ಫಿಶ್ ( ಹಸಿ ಫಿಶ್)ಈ ದೇಶ ಸುಮಾರು 300 ಕ್ಕೂ ಹೆಚ್ಚು ದ್ವೀಪಗಳಿಂದ ಕೂಡಿದೆ..
ಆದ್ರೆ ಕೇವಲ 110 ದ್ವೀಪಗಳಲ್ಲಿ ಮಾತ್ರವೇ ಜನರು ನೆಲೆಸಿದ್ದಾರೆ.. ವಿಶೇಷ ಅಂದ್ರೆ ಈ ದೇಶದಲ್ಲಿ ಒಂದಕ್ಕಿಂತ ಒಂದು ಹಿಂದೂ ದೇವಾಲಯಗಳು ಕಾಣಲಿಕ್ಕೆ ಸಿಗುತ್ತೆ…
ಇಲ್ಲಿ ಹಿಂದೂ ಧರ್ಮವನ್ನ ಅನುಸರಿಸುವ ಬಹುತೇಕ ಜನರಿದ್ಧಾರೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆಯಾಲಾಗುತ್ತದೆ. ಅನೇಕ ದೇಶಗಳಿಗೆ ಸಕ್ಕರೆ ರಫ್ತು ಮಾಡಲಾಗ್ತದೆ..
ಫಿಜಿಯಲ್ಲಿ ಸರ್ಕಾರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.. ಅದ್ರಲ್ಲೂ ಈ ದೇಶ ಪ್ಲಾಸ್ಟಿಕ್ ಮುಕ್ತವಾಗಿಸಲು ಅನೇಕ ಕ್ರಮಗಳನ್ನ ಕೈಗೊಂಡಿದೆ.. ಕೈಗೊಳ್ಳುತ್ತಿದೆ..
ಹಾಗೆ ನೋಡಿದ್ರೆ ಇನ್ನೊಂದೆರೆಡು ವರ್ಷಗಳಲ್ಲಿ ಈ ದೇಶವು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗೋದ್ರಲ್ಲಿ ಅನುಮಾನವೇ ಇಲ್ಲ.. ಫಿಜಿ ಕಡು ಬಡ ರಾಷ್ಟ್ರಗಳ ಪಟ್ಟಿಗೆ ಸೇರಿದೆ..
ಇಲ್ಲಿನ ಬಹುತೇಕ ಜನಸಂಖ್ಯೆ ಇಂದಿಗೂ ಬಡರೇಖೆಗಿಂತಲೂ ಕಡಿಮೆ ವರ್ಗದವರೇ ಆಗಿದ್ಧಾರೆ.. ಈ ದೇಶದ ಆರ್ಥಿಕತೆಯ ಬಹುದೊಡ್ಡ ಮೂಲ ಮೀನು ಮಾರಾಟ , ರಫ್ತು.
ಇಲ್ಲಿಂದ ಬಹುತೇಕ ಮೀನುಗಳನ್ನ ದಕ್ಷಿಣ ಅಮೆರಿಕಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತೆ..
ಫಿಜಿಯ ಕರೆನ್ಸಿ – ಫಿಜಿಯನ್ ಡಾಲರ್ – ಅಂದ್ರೆ 1 ಫಿಜಿಯನ್ ಡಾಲರ್ ಭಾರತದ ಸುಮಾರು 34 ರಿಂದ 35 ರೂಪಾಯಿಗೆ ಸಮ ಇನ್ನೂ ಗಮನಾರ್ಹ ಸಂಗತಿಯಂದ್ರೆ ಈ ದೇಶದಲ್ಲಿ ಸುಮಾರು 77 % ಜನರು ಹಿಂದೂಗಳಾಗಿದ್ದಾರೆ..
ಇನ್ನೂ ಭಾರತೀಯರು ಈ ದೇಶದಲ್ಲಿ ವೀಸಾವಿಲ್ಲದೆ ಸುಮಾರು 120 ದಿನಗಳ ಕಾಲ ಉಳಿದುಕೊಳ್ಳಬಹುದು..
ಇನ್ನೂ ಇಲ್ಲಿನ ಮತ್ತೊಂದು ವಿಚಿತ್ರ ಪರಂಪರೆ ಅಂದ್ರೆ ಹುಡುಗಿಯನ್ನ ಮದುವೆಯಾಗುವ ಹುಡುಗ ಆಕೆಯ ತಂದೆಗೆ ವೇಲ್ ( ತಿಮಿಂಗಳ) ನ ಹಲ್ಲನ್ನ ನೀಡಬೇಕಾಗುತ್ತದೆ.. ಇಲ್ಲದೇ ಹೋದ್ರೆ ಹುಡುಗರು ಅವಿವಾಹಿತರಾಗಿಯೇ ಉಳಿಯಬೇಕಾಗುತ್ತದೆ.
ವಿನಾಶದಂಚಿಗೆ ಸರಿಯುತ್ತಿರುವ ಚಿಪ್ಪುಹಂದಿ (PANGOLIN)ಗಳೆಂಬ ವಿಸ್ಮಯ ಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು?