ಇಂದಿನಿಂದ ಥಿಯೇಟರ್ ಗಳಲ್ಲಿ 100% ಸೀಟಿಂಗ್ : ಸಿನಿಮಾ ಪ್ರಿಯರು ಫುಲ್ ಖುಷ್..!
ಇಂದಿನಿಂದ ಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಶೇ.100 ಆಸನ ಭರ್ತಿಗೆ ಅವಕಾಶ ನೀಡಿತ್ತು. ಹೊಸ ಮಾರ್ಗಸೂಚಿ ಜಾರಿಗೊಳಿಸಿ, ಪೂರ್ಣ ಪ್ರಮಾಣದ ಚಿತ್ರಮಂದಿರಗಳನ್ನು ಓಪನ್ ಮಾಡಲು ಅನುಮತಿ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಿನಿಮಾ ಪ್ರದರ್ಶನ ಮಾಡುವಂತೆ ತಿಳಿಸಿದೆ. ಆದ್ರೆ ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಹಿಂದೆ ಇದ್ದ ನಿಯಮಗಳು ಮುಂದುವರೆಯಲಿದೆ.
ಒಟ್ಟಾರೆ ಕೊರೊನಾ ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್ ಡೌನ್ ವೇಳೆ ಸುಮಾರು 6-7 ತಿಂಗಳುಗಳ ಕಾಲ ಬಂದ್ ಆಗಿದ್ದ ಸಿನಿಮಾ ಥಿಯೇಟರ್ ಗಳ ಪುನರಾರಂಭಕ್ಕೆ ಅಕ್ಟೋಬರ್ 15 ರಿಂದ ಅವಕಾಶ ನೀಡಲಾಗಿತ್ತು. ಆದ್ರೆ ಪೂರ್ಣ ಪ್ರಮಾಣದ ಸೀಟಿಂಗ್ ವ್ಯವಸ್ಥೆಗೆ ಅನುಮತಿ ವಿಧಿಸಿರಲಿಲ್ಲ. ಶೇ 50 ರಷ್ಟು ಸೀಟಿಂಗ್ ಗೆ ಮಾತ್ರ ಅನುಮತಿ ನೀಡಲಾಗಿತ್ತು. ಇದ್ರಿಂದಾಗಿ ಯಾವುದೇ ಸ್ಟಾರ್ ನಟರ ಸಿನಿಮಾಗಳು, ಹೊಸ ಸಿನಿಮಾಗಳನ್ನ ರಿಲೀಸ್ ಮಾಡಲು ಮೇಕರ್ಸ್ ಹಿಂದೇಟು ಹಾಕ್ತಾಯಿದ್ರು. ಅಲ್ದೇ ಇದ್ರಿಂದಾಗಿ ಸಿನಿಮಾ ಮಾಲೀಕರಿಗೆ ನಷ್ಟ ಉಂಟಾಗುತ್ತಿತ್ತು. ಇದೀಗ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಬುರ್ಜ್ ಖಲೀಫಾದಲ್ಲಿ ಕಿಚ್ಚನ ‘ವಿಕ್ರಾಂತ್ ರೋಣ’ ಟೈಟಲ್ ಲೋಗೋ ಅನಾವರಣ..!
ಜನವರಿಯಿಂದಾದರೂ ಪೂರ್ಣಪ್ರಮಾಣದ ಅವಕಾಶ ಸಿಗುತ್ತಾ ಎಂದು ಸಿನಿಮಾ ಮಂದಿ ಕಾಯುತ್ತಿದ್ದರು. ಆದಕೆ ಜನವರಿ ತಿಂಗಳು ಸಹ ನಿರಾಸೆ ಮೂಡಿಸಿತ್ತು. ಶೇ.50ರಷ್ಟು ಆಸನದಲ್ಲೇ ಅನೇಕ ಸಿನಿಮಾಗಳು ರಿಲೀಸ್ ಆಗಿದೆ. ಇತ್ತೀಚಿಗೆ ತಮಿಳುನಾಡು ಸರ್ಕಾರ ಪರ್ಣ ಪ್ರಮಾಣದ ಅವಕಾಶ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ ಅವಕಾಶವನ್ನು ಹಿಂಪಡೆದಿತ್ತು.
ಇತ್ತ ಈಗಾಗಲೇ ಕನ್ನಡದ ಬಿಗ್ ಸ್ಟಾರ್ ಗಳ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಸಹ ರಿವೀಲ್ ಆಗಿದೆ. ಇದ್ರ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸಿನಿಪ್ರಿಯರಿಗಷ್ಟೇ ಅಲ್ದೇ ಸಿನಿಮಾ ತಾರೆಯರಿಗೂ ಭರ್ಜರಿ ಸಂತಸ ಮೂಡಿಸಿದೆ. ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಹೀರೋ ಗಳ ಮಾಸ್ ಎಂಟ್ರಿ ಡೈಲಾಗ್ಸ್ ಗಳಿಗೆ ಶಿಳ್ಳೆ ಚಪ್ಪಾಳೆಗಳ ಸೌಂಡ್ಸ್, ತೆರೆ ಮುಂದೆ ಫ್ಯಾನ್ಸ್ ಗಳ ಮಸ್ತ್ ಡ್ಯಾನ್ಸ್ ಇವೆಲ್ಲಾ ರಿಪೀಟ್ ಆಗಲಿದ್ದು, ಮತ್ತೊಮ್ಮ ಥಿಯೇಟರ್ ಗಳು ಜೀವಕಳೆ ಪಡೆದುಕೊಳ್ಳಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








