Filmfare Awards South :ಕನ್ನಡದಿಂದ ಪ್ರಶಸ್ತಿ ಗೆದ್ದ ನಟ ನಟಿಯರ ಲೀಸ್ಟ್ ಇಲ್ಲಿದೆ… (Filmfare Awards South : list of award winning actors)
67ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿತು. 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರೆಲ್ಲರೂ ಭಾಗವಹಿಸಿದ್ದರು.
ಈ ಬಾರಿ ಜೀವ ಮಾನ ಸಾಧನೆಗಾಗಿ ಪುನೀತ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು. ಈ ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ವೀಕರಿಸಿದರು. ಗರುಡ ಗಮನ ವೃಷಭ ವಾಹನ ಚಿತ್ರದ ನಿರ್ದೇಶನಕ್ಕಾಗಿ ರಾಜ್ ಬಿ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಸಂದಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ಆ್ಯಕ್ಟ್ 1978 ಸಿನಿಮಾಗೆ ಅತೀ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ಇದೇ ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅತ್ಯುತ್ತಮ ನಟಿಯಾಗಿ ಹೊರ ಹೊಮ್ಮಿದ್ದಾರೆ. ಆ್ಯಕ್ಟ್ 1978 ಸಿನಿಮಾಗೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಚಿತ್ರದ ಪ್ರಶಸ್ತಿಯನ್ನು ನಿರ್ಮಾಪಕ ದೇವರಾಜ್ ಆರ್ ಪಡೆದುಕೊಂಡರು.
ಡಾ.ರಾಜ್ ಕುಟುಂಬದ ಕುಡಿ, ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಅವರಿಗೆ ನಿನ್ನ ಸನಿಹಕೆ ಚಿತ್ರಕ್ಕಾಗಿ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿ ದೊರತಿದೆ.
ಯುವರತ್ನ ಚಿತ್ರಕ್ಕಾಗಿ ಅತ್ಯುತಮ ನೃತ್ಯ ನಿರ್ದೇಶಕ ಪ್ರಶಸ್ತಿ ಜಾನಿ ಮಾಸ್ಟರ್ ಪಾಲಾಗಿದೆ.
ಅತ್ಯುತ್ತಮ ನಟ ಡಾಲಿ ಧನಂಜಯ್ (ಬಡವ ರಾಸ್ಕಲ್)
ಅತ್ಯುತಮ ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ (ರತ್ನನ ಪ್ರಪಂಚ),
ಅತ್ಯುತಮ ಸಂಗೀತ ನಿರ್ದೇಶಕ ವಾಸುಕಿ ವೈಭವ್ (ಬಡವ ರಾಸ್ಕಲ್),
ಅತ್ಯುತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್),
ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್),
ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್)
Filmfare Awards South : Here is the list of award winning actors and actresses from Kannada…