ಬೆಂಗಳೂರು: ಚಿತ್ರ ವಿತರಕರಾಗಿ, ನಿರ್ಮಾಪಕ, ಉದ್ಯಮಿ ಕಪಾಲಿ ಮೋಹನ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ನಗರದ ಪೀಣ್ಯ ಬಸವೇಶ್ವರ ನಿಲ್ದಾಣದ ಬಳಿ ಇರುವ ಸುಪ್ರೀಂ ಹೋಟೆಲ್ ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಹೋಟೆಲ್ ನಲ್ಲಿ ತಂಗಿದ್ದ ಮೋಹನ್ ಇಂದು ಬೆಳಗ್ಗೆ ಸಿಬ್ಬಂದಿ, ಬಾಗಿಲು ತಟ್ಟಿದಾಗ ತೆಗೆಯಲಿಲ್ಲ. ಹೀಗಾಗಿ ಕಿಟಕಿ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಹೋಟೆಲ್ ಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಪಾಲಿಮೋಹನ್ ಡಾ. ರಾಜ್ ಕುಮಾರ್ ಫ್ಯಾಮಿಲಿಗೆ ತುಂಬಾ ಹತ್ತಿರವಾಗಿದ್ದರು. ಈ ಹಿಂದೆ ಸಿಸಿಬಿಯಿಂದ ಮೋಹನ್ ಮನೆ ಮೇಲೆ ರೇಡ್ ಆಗಿತ್ತು.