ಲೋಕಸಭೆಯಲ್ಲಿ ಹಣಕಾಸು ಮಸೂದೆ – 2022 ಅಂಗೀಕಾರ
ದೇಶದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 5 ಕೋಟಿಯಿಂದ 9 ಕೋಟಿ 10 ಲಕ್ಷಕ್ಕೆ ಏರಿದೆ ಎಂದು ಹಣಕಾಸು ಸಚಿವ ನಿರ್ಮಾಲ ಸೀತಾರಾಮನ್ ಲೋಕಸಭೆಯಲ್ಲಿಂದು ತಿಳಿಸಿದ್ದಾರೆ. ಹಣಕಾಸು ಮಸೂದೆ – 2022ಅನ್ನು ಪರಿಶೀಲನೆ ಮತ್ತು ಅಂಗೀಕಾರಕ್ಕೆ ಮಂಡಿಸಿ ಮಾತನಾಡಿದ ಅವರು, ಕಾರ್ಪೋರೇಟ್ ತೆರಿಗೆ ಇಳಿಕೆಯಿಂದ ಆರ್ಥಿಕತೆಗೆ ಸರ್ಕಾರಕ್ಕೆ ಮತ್ತು ಕಂಪನಿಗಳಿಗೆ ಪ್ರಯೋಜನವಾಗಿದೆ .
ಕೋವಿಡ್ ಸಾಂಕ್ರಾಮಿಕ ಮತ್ತು ತೆರಿಗೆ ಇಳಿಕೆ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಇವರಿಗೆ 7 ಲಕ್ಷ 30 ಸಾವಿರ ಕೋಟಿ ರೂಪಾಯಿ ಕಾರ್ಪೋರೇಟ್ ತೆರಿಗೆ ಸಂಗ್ರಹವಾಗಿದೆ. ಆರ್ಥಿಕತೆ ಚೇತರಿಕೆಗಾಗಿ ತೆರಿಗೆಗಳನ್ನು ಸರ್ಕಾರ ಹೆಚ್ಛಿಸಿಲ್ಲ. ಎಂ.ಎಸ್.ಎಂ.ಇ ಗಳನ್ನು ಪ್ರೋತ್ಸಾಹಿಸಲು ಕೊಡೆಗಳ ಮೇಲಿನ ಕಷ್ಟಂ ಸುಂಕವನ್ನು ಹೆಚ್ಚಿಸಲಾಗಿದೆ ಎಂದರು.
ನಂತರ ಹಣಕಾಸು ಮಸೂದೆಯನ್ನು ಸದನ ಅಂಗೀಕರಿಸಿತು. ಭಾರತೀಯ ಮತದಾನ ವ್ಯವಸ್ಥೆ ಅನೇಕ ದೇಶಗಳ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಭಾರತ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿರುವುದಕ್ಕೆ ಕೋಟ್ಯಂತರ ಜನರು ಅಭಿನಂದನಾರ್ಹರು ಎಂದರು.