60 ನಿಮಿಷಗಳಲ್ಲಿ ನಾನ್-ವೆಜ್ ಥಾಲಿ ತಿನ್ನಿ – ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಗೆಲ್ಲಿ !
ಪುಣೆ, ಜನವರಿ21: ನೀವು ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಖರೀದಿಸಲು ಬಯಸಿದರೆ – ಅದನ್ನು ಪಡೆಯಲು ಇಲ್ಲಿದೆ ನಿಮಗೆ ಅವಕಾಶ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಈ ಪುಣೆ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ‘ವಿನ್ ಎ ಬುಲೆಟ್ ಬೈಕ್’ ಎಂಬ ವಿಶಿಷ್ಟ ಸ್ಪರ್ಧೆಯನ್ನು ನೀಡಿದೆ. ವರದಿಗಳ ಪ್ರಕಾರ ಪುಣೆಯ ಹೊರವಲಯದಲ್ಲಿರುವ ವಾಡ್ಗಾಂವ್ ಮಾವಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶಿವರಾಜ್ ಹೋಟೆಲ್, 60 ನಿಮಿಷಗಳಲ್ಲಿ ನಾನ್-ವೆಜ್ ಥಾಲಿ ತಿಂದು ಮುಗಿಸುವ ಯಾವುದೇ ಸ್ಪರ್ಧಿಗಳಿಗೆ 1.65 ಲಕ್ಷ ರೂಪಾಯಿ ಮೌಲ್ಯದ ರಾಯಲ್ ಎನ್ಫೀಲ್ಡ್ ಬುಲೆಟ್ ನೀಡಲಿದೆ.
ನೀವು ತಿನ್ನಬೇಕಿರುವ ಭಕ್ಷ್ಯಗಳ ಪಟ್ಟಿ ಇಲ್ಲಿದೆ:
ಆದರೆ ಇದು ಸುಲಭದ ಕೆಲಸವಲ್ಲ. ಸ್ಪರ್ಧಿಗಳು ಫ್ರೈಡ್ ಸುರ್ಮೈ, ಪೊಮ್ಫ್ರೆಟ್ ಫ್ರೈಡ್ ಫಿಶ್, ಚಿಕನ್ ತಂದೂರಿ, ಡ್ರೈ ಮಟನ್, ಗ್ರೇ ಮಟನ್, ಚಿಕನ್ ಮಸಾಲಾ ಮತ್ತು ಕೊಲಂಬಿ (ಸೀಗಡಿ ) ಬಿರಿಯಾನಿ ಸೇರಿದಂತೆ ಸುಮಾರು 12 ಭಕ್ಷ್ಯಗಳನ್ನು ಒಳಗೊಂಡಿರುವ ದೊಡ್ಡ ಮಾಂಸಾಹಾರಿ ಪ್ಲ್ಯಾಟರ್ ಅನ್ನು ತಿನ್ನಬೇಕಾಗುತ್ತದೆ.
ಸಂಸತ್ತು ಕ್ಯಾಂಟೀನ್ನಲ್ಲಿ ಇನ್ನು ಮುಂದೆ ಆಹಾರ ಸಬ್ಸಿಡಿಯಿಲ್ಲ – ಲೋಕಸಭಾ ಸ್ಪೀಕರ್ ಓಂ ಬಿರ್ಲಾ
ಪ್ರತಿ ಥಾಲಿಯ ಬೆಲೆ 2,500 ರೂ ಯಾಗಿದ್ದು, ರೆಸ್ಟೋರೆಂಟ್ ಮಾಲೀಕರು ಐದು ಹೊಸ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳನ್ನು ವರಾಂಡಾದಲ್ಲಿ ಇರಿಸಿದ್ದಾರೆ.
ನಡೆಯುತ್ತಿರುವ ಸಾಂಕ್ರಾಮಿಕದ ನಡುವೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಅದರ ಮಾರಾಟವನ್ನು ಹೆಚ್ಚಿಸಲು ರೆಸ್ಟೋರೆಂಟ್ ಈ ಹೊಸ ಆಲೋಚನೆಯೊಂದಿಗೆ ಬರಲು ನಿರ್ಧರಿಸಿದೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಇದಕ್ಕೂ ಮೊದಲು, ರೆಸ್ಟೋರೆಂಟ್ ಇದೇ ರೀತಿಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ನಾಲ್ಕು ಜನರು 8 ಕೆಜಿ ರಾವಣ ಥಾಲಿಯನ್ನು 60 ನಿಮಿಷಗಳಲ್ಲಿ ಮುಗಿಸಿದ್ದರು. ವಿಜೇತರಿಗೆ 5000 ರೂ.ಗಳ ನಗದು ಬಹುಮಾನ ನೀಡಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://twitter.com/SaakshaTv/status/1351924465622540293?s=19
https://twitter.com/SaakshaTv/status/1351924845550952451?s=19








