ಬೆಂಗಳೂರು: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕೇವಲ ಕಾರಿನ ನಂಬರ್ ಹಾಕಿ ಎ1(ಆರೋಪಿ) ಅಪರಿಚಿತ ಎಂದು ಉಲ್ಲೇಖ ಮಾಡಲಾಗಿದೆ. ಎಫ್ ಐಆರ್ ನಲ್ಲಿ ನಟಿ ಶರ್ಮಿಳಾ ಮಂಡ್ರೆ ಮತ್ತು ಲೋಕೇಶ್ ಇಬ್ಬರನ್ನೂ ಗಾಯಾಳು ಎಂದು ನಮೂದಿಸಲಾಗಿದೆ.ಸೆಕ್ಷನ್ 279, ಸೆಕ್ಷನ್ 134(ಬಿ) ಹಾಗೂ ಸೆಕ್ಷನ್ 337 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಲಾಕ್ ಡೌನ್ ಮಧ್ಯೆಯೂ ನಿನ್ನೆ ಮಧ್ಯರಾತ್ರಿ ಶರ್ಮಿಳಾ ಮಾಂಡ್ರೆ ಸ್ನೇಹಿತನೊಂದಿಗೆ ಜಾಲಿ ರೈಡ್ ಹೋದಾಗ ಅಪಘಾತ ನಡೆದಿತ್ತು. ಘಟನೆಯಲ್ಲಿ ಶರ್ಮಿಳಾ ಹಾಗೂ ಸ್ನೇಹಿತ ಗಾಯಗೊಂಡಿದ್ದರು. ಕೂಡಲೇ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಲ್ಲಿಂದ ತೆರಳಿದ್ದರು.