‘ಆಝಾಧಿ’ ಘೋಷಣೆ ಕೂಗಿದ 6 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕೇಸ್..!
ಉತ್ತರಪ್ರದೇಶ: ದೇಶ ವಿರೋಧಿ ಘೋಷಣೆಗಳನ್ನು ಹಾಕಿದ ಆರೋಪದ ಮೇರೆಗೆ ಕೆ ಎಸ್ ಸಾಕೇತ್ ಪದವಿ ಕಾಲೇಜಿನ ವಿದ್ಯಾರ್ಥಿಗಳೂ ಸೇರಿದಂತೆ 6 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗಿದೆ.
ವ್ಹಾರೆ ವ್ಹಾ..! ಏನ್ ಐಡಿಯಾ ಗುರು..!
ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆಸುವಂತೆ ಆಗ್ರಹಿಸಿ ಸಾಕೇತ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಡಿಸೆಂಬರ್ 16 ರಂದು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ‘ಆಜಾದಿ ಲೇಕೆ ರಹೇಂಗೆ’ ಎಂಬ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಸಾಕೇತ್ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲ ಎನ್.ಡಿ ಪಾಂಡೆ ಅವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಕಲಿಸಿಕೊಳ್ಳಲಾಗಿದೆ.
ಆದ್ರೆ ಪ್ರಾಂಶುಪಾಲರ ಆರೋಪವನ್ನ ತಳ್ಳಿ ಹಾಕಿರುವ ವಿದ್ಯಾರ್ಥಿಗಳು, ನಾವು ಭ್ರಷ್ಟ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ವಿರೋಧಿ ವ್ಯವಸ್ಥೆಯಿಂದ ಸ್ವಾತಂತ್ರ್ಯ ಬಯಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಂದ್ಹಾಗೆ ಸುಮಿತ್ ತಿವಾರಿ, ಶೇಶ್ ನಾರಾಯಣ್ ಪಾಂಡೆ, ಇಮ್ರಾನ್ ಹಶ್ಮಿ, ಸಾತ್ವಿಕ್ ಪಾಂಡೆ, ಮೋಹಿತ್ ಯಾದವ್ ಮತ್ತು ಮನೋಜ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಚೀನಾಗೆ ಶಾಕ್ ಕೊಟ್ಟ ಭಾರತ : ಚೀನಿಯರ ಪ್ರವೇಶಕ್ಕೆ ನಿರ್ಬಂಧ..!
ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ), 147 (ಗಲಭೆ), 188 (ಆದೇಶಕ್ಕೆ ಅವಿಧೇಯತೆ), 332, 342, 353 (ಸಾರ್ವಜನಿಕ ಸೇವಕನ ಮೇಲಿನ ಹಲ್ಲೆ), 427 (ಆಸ್ತಿಗೆ ಹಾನಿ ), 435 (ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ) ಮತ್ತು 506 (ಕ್ರಿಮಿನಲ್ ಬೆದರಿಕೆ ಅಪರಾಧ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








