ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳೆಯುವ ಷಡ್ಯಂತ್ರ – ಗ್ರೇಟಾ ಥನ್ ಬರ್ಗ್ ಟ್ವೀಟ್: ಟೂಲ್ ಕಿಟ್ ವಿರುದ್ಧ FIR
ನವದೆಹಲಿ: ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇದೀಗ ಉಗ್ರ ಸ್ವರೂಪ ಪಡೆದಿದೆ. ಇದು ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗೋದಕ್ಕೆ ಶುರುವಾಗಿದೆ. ಆದ್ರೆ ಇದೇ ವಿಚಾರವಾಗಿ ಅಂತರಾಷ್ಟ್ರೀಯ ತಾರೆಯರು, ಹಾಗೂ ಕೆಲ ಟ್ವಿಟ್ಟರ್ ಬಳಕೆದಾರರು ಪ್ರಚೋದಾತ್ಮಕ ಪೋಸ್ಟ್ ಗಳನ್ನ ಹಾಕುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಮಸಿ ಬಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಅಪ್ರಾಪ್ತೆ ಸ್ವಇಚ್ಛೆಯಿಂದ ವಿವಾಹವಾದ್ರು, ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ – ನ್ಯಾಯಾಲಯ..!
ಇದೇ ರೀತಿಯಾಗಿ ಟ್ವೀಟ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ಧಿಯಾಗಿರುವ ಗ್ರೇಟಾ ಥನ್ ಬರ್ಗ್ ಶೇರ್ ಮಾಡಿರುವ ಟೂಲ್ ಕಿಟ್ ವಿರುದ್ಧ ಇದೀಗ FIR ದಾಖಲು ಮಾಡಲಾಗಿದೆ.
ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ..!
ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್ ಡಾಕ್ಯುಮೆಂಟ್ ಅನ್ನು ಈಕೆ ಟ್ವೀಟ್ ಮಾಡಿದ್ದಳು. ನಂತರ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ ಪೋಸ್ಟ್ ನ ಸ್ಕ್ರೀನ್ಷಾಟ್ ದಾಖಲೆ ರೂಪದಲ್ಲಿ ಸಿಕ್ಕಿದೆ. ಇದರ ಆಧಾರದ ಮೇಲೆ ಈಕೆ ಪೋಸ್ಟ್ ಮಾಡಿರುವ ಟೂಲ್ ಕಿಟ್ ವಿರುದ್ಧ FIR ದಾಖಲು ಮಾಡಲಾಗಿದೆ.
ಪಾಕಿಸ್ತಾನಕ್ಕೆ ಮರ್ಮಾಘಾತ : ಇರಾನ್ ನಿಂದ ಮತ್ತೊಂದು Surgical Strike..!
ಈಕೆ ಶೇರ್ ಮಾಡಿದ್ದ ಟೂಲ್ ಕಿಟ್ ನಲ್ಲಿ ಯಾವ್ಯಾವ ರೀತಿಯಲ್ಲಿ, ಹೇಗ್ಹೇಗೆ ಪ್ರತಿಭಟನೆ ಮಾಡಬೇಕು ಎಂದು ಪ್ರಚೋದನೆ ನೀಡುವ ದಾಖಲೆಗಳನ್ನು ಗ್ರೇಟಾ ಟ್ವೀಟ್ ಮಾಡಿದ್ದಳು. ಇದರ ಹಿಂದಿರುವ ಶಕ್ತಿ ಯಾವುದು ಎಂದು ಇನ್ನಷ್ಟೇ ವಿಷಯ ಬೆಳಕಿಗೆ ಬರಬೇಕಿದೆ. ಟ್ವೀಟ್ ಮಾಡಿರುವುದು ಯಾರನ್ನು ಓಲೈಸಲು ಹಾಗೂ ನಂತರ ಹೆದರಿ ಟ್ವೀಟ್ ಡಿಲೀಟ್ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಬರುವ ನಿಟ್ಟಿನಲ್ಲಿ ಈಕೆ ಮಾಡಿರುವ ಟ್ವೀಟ್ನಿಂದಾಗಿ, ಗುಂಪು ಗುಂಪುಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡಿ, ಸಾಮರಸ್ಯ ಕದಡಲು ಷಡ್ಯಂತ್ರ ರಚಿಸಿರುವ ಆರೋಪದ ಮೇಲೆ ಟೂಲ್ ಕಿಟ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಚೀನಾದಲ್ಲಿ ಸಿಲುಕಿರುವ ಭಾರತದ ನಾವಿಕರ ಬಿಡುಗಡೆಗೆ ಕೊನೆಗೂ ಚೀನಾ ಒಪ್ಪಿಗೆ
ಬೇಬಿ ಬಂಪ್ ಪ್ರದರ್ಶಿಸಿದ ನಟಿ ಕರೀನಾ ಕಪೂರ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel