ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ : ‘ಕೈ’ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್ ಐ ಆರ್..!
ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹಲ್ಲೆ ನಡೆಸಿದ ಪ್ರಕರಣ ಸಂಬAಧ ಶಾಸಕಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ರಾಜ್ಯ ಕಾಂಗ್ರೆಸ್ ಕೈಗೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಹೋಂ ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸೌಮ್ಯಾ ರೆಡ್ಡಿಯವರನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ, ಸೌಮ್ಯಾ ರೆಡ್ಡಿ ಮಹಿಳಾ ಪೇದೆಯೊಬ್ಬರಿಗೆ ಹೂ ದಿ ಹೆಲ್ ಆರ್ ಯು ಎಂದು ನಿಂದಿಸುತ್ತಾ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೌಮ್ಯಾ ರೆಡ್ಡಿಯವರು ಸರ‍್ವಜನಿಕರ ಟೀಕೆಗೂ ಗುರಿಯಾದರು. ಆದರೆ, ಸೌಮ್ಯಾ ರೆಡ್ಡಿ ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಮ್ಮ ಮೇಲೆ ಮಹಿಳಾ ಪೇದೆಯೇ ದರ‍್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು.
ಅಕ್ರಮ ಕ್ವಾರಿ, ಕ್ರಷರ್ ವಿರುದ್ಧ ಮುಲಾಜಿಲ್ಲದೆ ಕ್ರಮ; ಗಣಿ ಸಚಿವ ಮುರುಗೇಶ್ ನಿರಾಣಿ ಭರವಸೆ
ಈ ನಡುವೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಸೌಮ್ಯಾ ರೆಡ್ಡಿಯವರು, ಪೊಲೀಸರು ನಮ್ಮನ್ನು ೨೦ ನಿಮಿಷಕ್ಕೂ ಹೆಚ್ಚು ಕಾಲ ತಳ್ಳಾಡುತ್ತಿದ್ದರು. ನಾವೇನೋ ಕ್ರಿಮಿನಲ್ ಗಳಂತೆ ನೋಡುತ್ತಿದ್ದರು. ತಳ್ಳಾಟದಲ್ಲಿ ನನ್ನ ಕತ್ತು ಹಾಗೂ ಭುಜಗಳ ಮೇಲೆ ಗಾಯಗಳಾಗಿವೆ. ಸಾಕಷ್ಟು ಹಲ್ಲೆಗಳೂ ನನ್ನ ಮೇಲೆ ನಡೆದಿದೆ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪುತ್ತಿದ್ದೆ. ಹೀಗಾಗಿ ನೀರಿಗಾಗಿ ಹತ್ತಿರದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷರ ಬಳಿ ತೆರಳಲು ಯತ್ನಿಸಿದ್ದೆ. ಈ ವೇಳೆ ಮಹಿಳಾ ಪೇದೆ ನನ್ನನ್ನು ವಶಕ್ಕೆ ಪಡೆಯಲು ಮುಂದಾದರು. ಕೈಬಿಡುವಂತೆ ತಿಳಿಸಿದ್ದೆ. ಅದು ಸಾಮಾನ್ಯ ರ‍್ತನೆಯಾಗಿತ್ತು ಎಂದು ಹೇಳಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








