ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ FIR ದಾಖಲು
ಕಲಬುರಗಿ: ರಾಮನವಮಿ ಆಚರಿಸಿದ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಧಿಕ್, ರಾಹುಲ್ ಹಾಗೂ ರಾಹುಲ್ ಆರ್ಯ ಪ್ರಕರಣ ದಾಖಲಾಗಿದ್ದು, ಇವರ ಮೇಲೆ ನರೋಣ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143(ಕಾನೂನು ಬಾಹಿರ ಚಟುವಟಿಕೆ), 147 (ಗಲಭೆ), 341 (ತಪ್ಪು ಗ್ರಹಿಕೆ), 323 (ಸ್ವಯಂಪ್ರೇರಿತ ಹಲ್ಲೆ), 324(ಆಯುಧಗಳಿಂದ ಹಲ್ಲೆ), 307 (ಹತ್ಯೆಗೆ ಯತ್ನ), 504 (ಉದ್ದೇಶಪೂರಕವಾಗಿ ಅವಹೇಳನ ಮಾಡುವುದಕ್ಕೆ), 506 (ಕ್ರಿಮಿನಲ್ ಬೆದರಿಕೆ)ರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ರಾಮನವಮಿ ನಿಮಿತ್ತ ಕ್ಯಾಂಪಸ್‌ನಲ್ಲಿರುವ ಲಕ್ಚ್ಮೀ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದ ವಿದ್ಯಾರ್ಥಿಗಳು ಮರಳಿ ಬರುವಾಗ ನಾವು ಎಬಿವಿಪಿ, ಆರ್‌ಎಸ್‌ಎಸ್ ಸಂಘಟನೆಯವರು ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿದವರು ಯಾವ ಸಂಘಟನೆಯವರು ಎಂದು ಗೊತ್ತಿಲ್ಲ.
ಆದರೆ ನಾವು ಎಬಿವಿಪಿ ಸಂಘಟನೆಯವರು ಅಂತ ಹಲ್ಲೆ ಮಾಡಿದ್ದಾರೆ. ಕ್ಯಾಂಪಸ್ ಆವರಣದಲ್ಲಿ ಯಾಕೆ ರಾಮನವಮಿ ಮಾಡಿದ್ದೀರಿ? ಎಂದು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಿಶ್ವನಾಥ್ ಹೇಳಿದ್ದರು. ಅವರು ನೀರಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.