ಬೆಂಗಳೂರಿನ ಕೆಪಿಸಿಎಲ್ ನಲ್ಲಿ ಅಗ್ನಿ ಆಕಸ್ಮಿಕ- 15 ಉದ್ಯೋಗಿಗಳಿಗೆ ಗಾಯ
ಬೆಂಗಳೂರು, ಅಕ್ಟೋಬರ್02: ಬೆಂಗಳೂರಿನ ಯಲಹಂಕದಲ್ಲಿರುವ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಕೆಪಿಸಿಎಲ್) ನಲ್ಲಿ ಶುಕ್ರವಾರ ಮುಂಜಾನೆ 3.30 ರ ಸುಮಾರಿಗೆ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಎಂಜಿನಿಯರ್ಗಳು ಸೇರಿದಂತೆ ಕನಿಷ್ಠ 15 ಉದ್ಯೋಗಿಗಳು ಶುಕ್ರವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದಾರೆ. ಅನಿಲ ಸೋರಿಕೆಯಿಂದಾಗಿ ಈ ಘಟನೆ ನಡೆದಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಈಶಾನ್ಯ ಪೊಲೀಸ್ ಉಪ ಆಯುಕ್ತ ಸಿ.ಕೆ.ಬಾಬಾ ಮಾತನಾಡಿ, ಏಳು ಅಗ್ನಿಶಾಮಕಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ. ಗಾಯಗೊಂಡವರೆಲ್ಲರೂ ಈಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಾವರದ ಇಬ್ಬರು ಉದ್ಯೋಗಿಗಳ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಕೆಪಿಸಿಎಲ್ ಈ ಘಟನೆ ಮತ್ತು ಅಪಘಾತದ ಹಿಂದಿನ ಕಾರಣದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಗಾಯಗೊಂಡ ಎಂಜಿನಿಯರ್ಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಕಂಡುಬಂದಿದೆ.
https://twitter.com/nkaggere/status/1311922089956315136?s=19
ಪುಟ್ಟನಹಳ್ಳಿ ಸರೋವರ ಪ್ರದೇಶದ ಬಳಿಯ ಯಲಹಂಕದಲ್ಲಿರುವ ಕೆಪಿಸಿಎಲ್ ಸ್ಥಾವರವು 350 ಮೆಗಾವ್ಯಾಟ್ ಅನಿಲ ಆಧಾರಿತ ವಿದ್ಯುತ್ ಸ್ಥಾವರವಾಗಿದೆ. ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಿ ಪೊನ್ನುರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಶುಕ್ರವಾರ ಮಧ್ಯಾಹ್ನ ಸ್ಥಳ ಪರಿಶೀಲನೆ ನಡೆಸಿದ್ದಾರೆ.








