ಎನ್ಸಿಬಿ ಕಚೇರಿಯನ್ನು ಹೊಂದಿರುವ ಮುಂಬೈನ ಎಕ್ಸ್ಚೇಂಜ್ ಕಟ್ಟಡದಲ್ಲಿ ಬೆಂಕಿ
ಮುಂಬೈ, ಸೆಪ್ಟೆಂಬರ್21: ಎನ್ಸಿಬಿ ಕಚೇರಿಯನ್ನು ಹೊಂದಿರುವ ಮುಂಬೈನ ಎಕ್ಸ್ಚೇಂಜ್ ಕಟ್ಟಡದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಪ್ರಸ್ತುತ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಕಚೇರಿಯನ್ನು ಹೊಂದಿರುವ ಬಲ್ಲಾರ್ಡ್ ಎಸ್ಟೇಟ್ನ ಕಟ್ಟಡದ ಎರಡನೇ ಮಹಡಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಎನ್ಸಿಬಿ ಕಚೇರಿ ಕಟ್ಟಡದ ಮೂರನೇ ಮಹಡಿಯಲ್ಲಿದೆ.
ಶ್ರೀನಗರ- ಸಿಆರ್ಪಿಎಫ್ ಪಡೆ ಮೇಲೆ ಭಯೋತ್ಪಾದಕರ ದಾಳಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿದಿರಿನ ಕುಕೀಸ್
ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯಿಂದ ಯಾವುದೇ ಗಾಯಗಳು ಅಥವಾ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಹಲವಾರು ಜನರು ಕಟ್ಟಡದಿಂದ ಹೊರಗೆ ಓಡಿದರು.
ಆರಂಭಿಕ ವಿವರಗಳ ಪ್ರಕಾರ ಎರಡನೇ ಮಹಡಿಯಲ್ಲಿನ ಹವಾನಿಯಂತ್ರಣ ಸ್ಫೋಟಗೊಂಡು ಬೆಂಕಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದ ತಂಡಗಳು ಈ ಕರೆ ಬಂದ ತಕ್ಷಣ ಸ್ಥಳಕ್ಕೆ ತಲುಪಿದವು.
ಎನ್ಸಿಬಿ ಕಚೇರಿಯನ್ನು ಹೊಂದಿರುವ ಮುಂಬೈನ ಎಕ್ಸ್ಚೇಂಜ್ ಕಟ್ಟಡದಲ್ಲಿ ಬೆಂಕಿhttps://t.co/V4EzZdXRDb
— Saaksha TV (@SaakshaTv) September 21, 2020








