ಹೋಟಲ್ ಮಾಲಿಕ ತಡರಾತ್ರಿ ಊಟ ಇಲ್ಲ ಎಂದು ಹೇಳಿದ್ದಕ್ಕೆ , ಅಪರಿಚಿತ ದುಷ್ಕರ್ಮಿಗಳು ಹೋಟಲ್ ಗೆ ಬೆಂಕಿ ಹಚ್ಚಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಯಲ್ಲಿ ನಡೆದಿದೆ..
ನಿನ್ನೆ ತಡರಾತ್ರಿ ನಡೆದ ಈ ಘಟನೆ ನಡೆದಿದೆ.. ಕಿಡಿಗೇಡಿಗಳ ಕೃತ್ಯಕ್ಕೆ ಹೋಟೆಲ್ ಸುಟ್ಟು ಭಸ್ಮವಾಗಿದೆ.. ಹೋಟಲ್ ಸಿಬ್ಬಂದಿಯನ್ನು ಅಡುಗೆ ಕೋಣೆಯೊಳಗೆ ಕೂಡಿಹಾಕಿದ ದುಷ್ಕರ್ಮಿಗಳು ಈ ರೀತಿ ಕೃತ್ಯವೆಸಿಗಿದ್ಧಾರೆ..
ಗ್ರಾಮಸ್ಥರ ಸಹಾಯದಿಂದ ಸಿಬ್ಬಂದಿಗಳು ಹೇಗೋ ಹೊರಗಡೆ ಬಂದಿದ್ದಾರೆ… 11 ಕೊಠಡಿಗಳ ಹೋಟಲ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..








