ಕಾಶ್ಮೀರದಲ್ಲಿ ಗುಂಡಿನ ಚಕಮಕಿ | ಇಬ್ಬರು ಭಯೋತ್ಪಾದಕರ ಹತ್ಯೆ Saaksha Tv
ಶ್ರೀನಗರ: ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಜೋನ್ ಪೊಲೀಸರು ಟ್ವಿಟ್ ಮಾಡಿದ್ದಾರೆ.
ಶನಿವಾರ ಉಗ್ರರು ಕಾಶ್ಮೀರದ ಕಿಲ್ಬಾಲ್ ಪ್ರದೇಶದಲ್ಲಿ ಅಡಗಿ ಕುಳಿತಿರುವ ನಿಖರ ಮಾಹಿತಿಯೊಂದಿಗೆ ಸ್ಥಳಕ್ಕೆ ಹೋದ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶವನ್ನು ಸುತ್ತುವರೆದಿದೆ. ನಂತರ ಉಗ್ರರಿಗೆ ಶರಣಾಗುವಂತೆ ಸೂಚನೆ ನೀಡಿದೆ. ಆದರೆ ಉಗ್ರಗರು ಇದಕ್ಕೆ ಒಪ್ಪದೆ ಗುಂಡಿನ ದಾಳಿ ಮಾಡಿದ್ದಾರೆ. ಪ್ರತಿಯಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳ ತಂಡ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೈಬಾದ ಅಂಗಸಂಸ್ಥೆಯಾದ ಟಿಆರ್ಎಫ್ನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸಾವನ್ನಪ್ಪಿದ ಭಯೋತ್ಪಾದಕರನ್ನು ಶೋಪಿಯಾನ್ ಮೂಲದ ಸಮೀರ್ ಅಹ್ಮದ್ ಶಾ ಮತ್ತು ಪುಲ್ವಾಮಾದ ರಯೀಸ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ಕೆಲವು ಸಾಮಾಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಡಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ಪೊಲೀಸರು ತಿಳಸಿದ್ದಾರೆ.









