ಲಿಂಕ್ಡ್’ಇನ್ – 960 ಉದ್ಯೋಗಿಗಳ ವಜಾ
ನ್ಯೂಯಾರ್ಕ್, ಜುಲೈ 22: ಕೊರೊನಾವೈರಸ್ ಸಾಂಕ್ರಾಮಿಕವು ತನ್ನ ನೇಮಕಾತಿ ಉತ್ಪನ್ನಗಳ ಬೇಡಿಕೆಯ ಮೇಲೆ ನಿರಂತರ ಪರಿಣಾಮ ಬೀರುತ್ತಿರುವುದರಿಂದ ಮೈಕ್ರೋಸಾಫ್ಟ್ ನ ಭಾಗವಾಗಿರುವ ವೃತ್ತಿಪರ ನೆಟ್ವರ್ಕಿಂಗ್ ಸೈಟ್ ಲಿಂಕ್ಡ್’ಇನ್ ಮಂಗಳವಾರ ಸುಮಾರು 960 ಉದ್ಯೋಗಗಳನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳ ಶೇಕಡಾ 6 ರಷ್ಟು ಕಡಿತಗೊಳಿಸುವುದಾಗಿ ಹೇಳಿದೆ. ಕ್ಯಾಲಿಫೋರ್ನಿಯಾ ಮೂಲದ ಲಿಂಕ್ಡ್’ಇನ್, ನೌಕರರಿಗೆ ಹೊಸ ಉದ್ಯೋಗವನ್ನು ಅನ್ವೇಷಿಸಲು ಮತ್ತು ಉದ್ಯೋಗದಾತರಿಗೆ ಅಭ್ಯರ್ಥಿಯ ಸೂಕ್ತತೆಯನ್ನು ನಿರ್ಣಯಿಸಿ ಹೊಸ ನೌಕರರನ್ನು ಹುಡುಕಲು ಈ ವೇದಿಕೆ ನೆರವಾಗುತ್ತದೆ
ಜಾಗತಿಕವಾಗಿ ಗುಂಪಿನ ಮಾರಾಟ ಮತ್ತು ನೇಮಕಾತಿ ವಿಭಾಗಗಳಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತದೆ. ಲಿಂಕ್ಡ್’ಇನ್ನ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಯೋಜನೆಯನ್ನು ಪ್ರಕಟಿಸಿದ ಮುಖ್ಯ ಕಾರ್ಯನಿರ್ವಾಹಕ ರಿಯಾನ್ ರೋಸ್ಲಾನ್ಸ್ಕಿ, ಯುಎಸ್ ಉದ್ಯೋಗಿಗಳಿಗೆ ಕಂಪನಿಯು ಕನಿಷ್ಠ 10 ವಾರಗಳ ಬೇರ್ಪಡಿಕೆ ವೇತನ ಮತ್ತು ಆರೋಗ್ಯ ವಿಮೆಯನ್ನು ಒಂದು ವರ್ಷಕ್ಕೆ ಒದಗಿಸುತ್ತದೆ ಮತ್ತು ಜಾಗತಿಕ ವಲಸೆ ತಂಡವು ಕಂಪನಿ ಪ್ರಾಯೋಜಿತ ವೀಸಾಗಳಲ್ಲಿರುವವರಿಗೆ ವೈಯಕ್ತಿಕ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.
ಕೆಲಸದಿಂದ ವಜಾಗೊಂಡ ಸಿಬ್ಬಂದಿಗೆ ಇನ್ನೂ ಇದರ ಬಗ್ಗೆ ತಿಳಿಸಲಾಗಿಲ್ಲ. ಕಂಪನಿಯಿಂದ ನೀಡಲ್ಪಟ್ಟ ಸೆಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಇತ್ತೀಚೆಗೆ ಖರೀದಿಸಿದ ಉಪಕರಣಗಳು ವೃತ್ತಿಜೀವನದ ಪರಿವರ್ತನೆ ಮಾಡುವಾಗ ಮನೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕೊರೋನವೈರಸ್ ನಿಂದ ಜಾರಿಯಲ್ಲಿದ್ದ ಲಾಕ್ಡೌನ್ಗಳು ಪ್ರಪಂಚದಾದ್ಯಂತದ ಅರ್ಥಿಕ ಹೊಡೆತಕ್ಕೆ ಕಾರಣವಾಗಿದೆ. ಕಂಪನಿಗಳು ಸಿಬ್ಬಂದಿಯನ್ನು ವಜಾಗೊಳಿಸುವುದರಿಂದ ಅಥವಾ ಹೊಸ ನೇಮಕಗಳನ್ನು ಮೊಟಕುಗೊಳಿಸುವುದರಿಂದ ಲಿಂಕ್ಡ್ಇನ್ನ ವ್ಯವಹಾರಕ್ಕೆ ಹೊಡೆತ ಬಿದ್ದಿದೆ.
ಲಿಂಕ್ಡ್’ಇನ್ ತನ್ನ ಉದ್ಯೋಗ ಕಡಿತಕ್ಕೆ ಒಳಗಾದ ನೌಕರರಿಗೆ ಈ ವಾರ ತಿಳಿಸಲಾಗುವುದು ಮತ್ತು ಮುಂದಿನ ಹಂತಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದಿನ ಕೆಲವು ಗಂಟೆಗಳಲ್ಲಿ ಸಭೆಗಳನ್ನು ಕರೆಯಲಾಗಿದೆ ಎಂದು ಹೇಳಿದರು.
ಭಾರತದಲ್ಲಿ ಸುಮಾರು 1,200 ಉದ್ಯೋಗಿಗಳನ್ನು ಲಿಂಕ್ಡ್ ಇನ್ ಹೊಂದಿದ್ದು, ಇದು ಬೆಂಗಳೂರಿನಲ್ಲಿ ಅಭಿವೃದ್ಧಿ ಕೇಂದ್ರವನ್ನೂ ಹೊಂದಿದೆ. ಸಂಸ್ಧೆಯ ಈ ನಿರ್ಧಾರದಿಂದ ಭಾರತದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗ ಕಡಿತದ ಬಗ್ಗೆ ಲಿಂಕ್ಡ್ ಇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








