ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಹಲವೆಡೆ ಸಾಕಷ್ಟು ಅವಾಂತರಗಳು ನಡೆದಿವೆ.
ಹಲವೆಡೆ ಪ್ರತಿಭಟನೆ ಹಿಂಸಾಚಾರದ ರೂಪ ತಾಳಿವೆ. ಸತತ 5ನೇ ದಿನಕ್ಕೆ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆ ಹತ್ತಿಕ್ಕುವುದಕ್ಕಾಗಿ ಪಾಕಿಸ್ತಾನ ಸೇನೆ (Pakistan Army) ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಸುಮಾರು ಆರೇಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮದರಸಾದ ಮೇಲೆ ಟಿಯರ್ ಗ್ಯಾಸ್ ಸಿಡಿಸಿ, ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪುಲ್ವಾಮಾ ದಾಳಿ ಬಳಿಕ ಪಾಕ್ನಿಂದ ರಫ್ತಾಗುವ ಒಣಹಣ್ಣು, ಕಲ್ಲುಪ್ಪು, ಸಿಮೆಂಟ್ ಮೇಲೆ ಆಮದು ಸುಂಕವನ್ನು ಭಾರತ 200ರಷ್ಟು ಹೆಚ್ಚಿಸಿತ್ತು. 2019ರ ನಂತರ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಭಾರತದ ಜೊತೆಗಿನ ಸಂಪೂರ್ಣ ವ್ಯವಹಾರ ನಿಂತು ಹೋಗಿತ್ತು. ಭಾರತದ ಈ ನಿರ್ಧಾರ ಪಿಓಕೆ ಮೇಲೆ ದೊಡ್ಡ ಪರಿಣಾಮ ಬೀರುವಂತಾಗಿದೆ.
ಆರ್ಥಿಕತೆ ಸುಧಾರಣೆಗಾಗಿ ಪಾಕಿಸ್ತಾನದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದಾಗಿ ಪ್ರಧಾನಿ ಷೆಹಬಾಜ್ ಷರೀಫ್ ಘೋಷಿಸಿದ್ದಾರೆ.