ಇಂದು ಮೊದಲ ಆಷಾಢ : ಚಾಮುಂಡಿ ದರ್ಶನಕ್ಕಿಲ್ಲ ಅವಕಾಶ
ಮೈಸೂರು : ಇಂದು ಆಷಾಢದ ಮೊದಲ ಶುಕ್ರವಾರ ಹಾಗೂ ಆಷಾಢದ ಮೊದಲ ಅಮಾವಾಸ್ಯೆ ಕೂಡಾ. ಸಾಮಾನ್ಯವಾಗಿ ಇಂತಹ ವಿಶೇಷ ದಿನಗಳಲ್ಲಿ ದೇವಿಯ ದರ್ಶನಕ್ಕೆ ಭಕ್ತದಂಡೇ ಹರಿದು ಬರುತ್ತದೆ. ಆದ್ರೆ ಈ ಬಾರಿ ಚಾಮುಂಡಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಇಲ್ಲ.
ಕೊರೊನಾ ಅನ್ ಲಾಕ್ 3.0 ಮಾರ್ಗಸೂಚಿ ಅನ್ವಯ ಎರಡೂವರೆ ತಿಂಗಳ ಬಳಿಕ ಇದೇ ಸೋಮವಾರದಿಂದ ದೇಗುಲಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡಲಾಗಿದೆ.
ಆದರೆ ಮೈಸೂರಿನ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಶಿಷ್ಟಾಚಾರ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ, ಕರ್ತವ್ಯ ನಿರತ ಅಧಿಕಾರಿಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶ ಅವಕಾಶ ನೀಡಲಾಗಿದೆ.
ಇಂದು ಭಕ್ತರು ಜಾಸ್ತಿ ಬರಬಹುದು ಎಂಬ ಕಾರಣಕ್ಕೆ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರ ದರ್ಶನಕ್ಕೆ ನಿಬರ್ಂಧ ಹೇರಲಾಗಿದೆ.