ಕೋವಿಡ್ 3ನೇ ಅಲೆ… ಮಕ್ಕಳಿಗೆ ಹೆಚ್ಚು ಆತಂಕ – ಬೆಂಗಳೂರಲ್ಲಿ ಮೊದಲ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭ
ಬೆಂಗಳೂರು : ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅದು ಅಲ್ಲದೇ 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎಂದು ಕೆಲ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈಗಾಗಲೇ ಮಕ್ಕಳನ್ನ ಕೊರೊನಾ ಕಾಡಲು ಶುರು ಮಾಡಾಗಿದೆ ಎನ್ನುವುದಕ್ಕೆ ಬೆಂಗಳೂರಲ್ಲೇ ಪುರಾವೆ ಸಿಕ್ಕಿದೆ. ಹೌದು ರಾಜ್ಯ ರಾಜಧಾನಿಯಲ್ಲಿ ಆಗಸ್ಟ್ ಮೊದಲ 10 ದಿನಗಳಲ್ಲಿ 499 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಪೋಷಕರ ಆತಂಕ ಹೆಚ್ಚಾಗಿದೆ. ಅದು ಅಲ್ದೇ ಈವರೆಗೂ ಮಕ್ಕಳಿಗೆ ಲಸಿಕೆ ಬಾರದೇ ಇರೋದು ಆತಂಕವನ್ನ ಇಮ್ಮಡಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಮೊಟ್ಟ ಮೊದಲ ಮಕ್ಕಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ದಕ್ಷಿಣ ವಲಯದ ಪದ್ಮನಾಭನಗರದಲ್ಲಿರುವ ರೀಜನಲ್ ಮ್ಯಾನೇಜ್‍ಮೆಂಟ್ ಕೋಆಪರೇಟಿವ್ ಕೇಂದ್ರದಲ್ಲಿ 40 ಹಾಸಿಗೆಗಳ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿದೆ.
ಕೇರಳದಲ್ಲಿ 2 ನೇ ಡೋಸ್ ಪಡೆದ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ – ಕರ್ನಾಟಕಕ್ಕೂ ಗಂಡಾಂತರ…!
ಸೋಂಕಿಗೆ ತುತ್ತಾಗುವ ಮಕ್ಕಳಿಗೆ ಅವಶ್ಯವಿರುವ ಸಾಮಾನ್ಯ ಹಾಸಿಗೆ ಹಾಗೂ ಆಕ್ಸಿಜನ್ ಬೆಡ್‍ಗಳನ್ನು ಸಿದ್ದಪಡಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಬೇಸರ ಕಳೆಯಲು ಆಸ್ಪತ್ರೆ ಗೋಡೆಗಳ ಮೇಲೆ ಡೋರೆಮ್ಯಾನ್, ಸ್ಪೈಡರ್ 3ಡಿ ಕಾರ್ಟೂನ್‍ಗಳ ಚಿತ್ರ ಬಿಡಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮಕ್ಕಳು ಆಟವಾಡಲು ಸಹಕಾರಿಯಾಗುವಂತೆ ಪ್ಲೇ ಏರಿಯಾ ನಿರ್ಮಿಸಲಾಗಿದೆ. ಚಿಕ್ಕ ಮಕ್ಕಳು ದಾಖಲಾದರೆ ಅವರೊಂದಿಗೆ ಅವರ ಪೋಷಕರಲ್ಲಿ ಒಬ್ಬರು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನೂ ಪ್ರಾಯೋಗಿಕವಾಗಿ ದಕ್ಷಿಣ ವಲಯದಲ್ಲಿ ಪ್ರಾಯೋಗಿಕವಾಗಿ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಎಂಟು ವಲಯಗಳಲ್ಲೂ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ.
9 ವರ್ಷದೊಳಗಿನ ಸುಮಾರು 88 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ 305 ಮಂದಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. 499 ಪ್ರಕರಣಗಳ ಪೈಕಿ, ಕಳೆದ 5 ದಿನಗಳಲ್ಲಿ 263 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 88 ಪ್ರಕರಣಗಳು 9 ವರ್ಷದೊಳಗಿನವರಾಗಿದ್ದರೆ, 175 ಪ್ರಕರಣ 10 ರಿಂದ 19 ವರ್ಷ ವಯಸ್ಸಿನವರಾಗಿದ್ದಾರೆ. ಆರೋಗ್ಯ ಇಲಾಖೆಯು ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕಠಿಣ ಕ್ರಮಗಳನ್ನು ಆರಂಭಿಸಿದೆ. ಮುಂಬರುವ ಕೆಲವು ವಾರಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆಯ ಮೂಲಗಳು ಎಚ್ಚರಿಸಿರೋದು ಪೋಷಕರಿಗೆ ಆತಂಕ ಹೆಚ್ಚಾಗಿದೆ..