ಮೊದಲ ಭಾರತೀಯ ಕಂಪನಿಯ ರಾಪಿಡ್ ಟೆಸ್ಟಿಂಗ್ ಕಿಟ್ ಗೆ ಐಸಿಎಂಆರ್ ಅನುಮೋದನೆ
ಹೊಸದಿಲ್ಲಿ, ಜುಲೈ 25: ಮೊದಲ ಸ್ಥಳೀಯ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್ ಅನ್ನು ಪ್ರಾರಂಭಿಸಿದ ಪುಣೆ ಮೂಲದ ಆಣ್ವಿಕ ರೋಗನಿರ್ಣಯ ಕಂಪನಿಯಾದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದನೆಯೊಂದಿಗೆ ಆಂಟಿಜೆನ್ ಪರೀಕ್ಷಾ ಕಿಟ್‌ಗಳನ್ನು ತಯಾರಿಸುತ್ತಿದೆ.
ಪಾಥೊಕ್ಯಾಚ್ ಕೋವಿಡ್ -19 ಆಂಟಿಜೆನ್ ರಾಪಿಡ್ ಟೆಸ್ಟಿಂಗ್ ಕಿಟ್ ಎಂದು ಹೆಸರಿಸಲಾದ ಕಿಟ್ – ಐಸಿಎಂಆರ್ ನಿಂದ ವಾಣಿಜ್ಯ ಅನುಮೋದನೆ ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ ಎಂದು ಮೈಲಾಬ್ ಡಿಸ್ಕವರಿ ಸೊಲ್ಯೂಷನ್ ಎಂಡಿ ಹಸ್ಮುಖ್ ರಾವಲ್ ಹೇಳಿದ್ದಾರೆ.

ಕೋವಿಡ್ -19 ಸೋಂಕುಗಳು ದೇಶಾದ್ಯಂತ ಉಲ್ಬಣಗೊಂಡಿವೆ. ಹೆಚ್ಚಿನ ರಾಜ್ಯಗಳು ಭಾರತದಲ್ಲಿ ಆಯಂಟಿಜೆನ್ ಆಧಾರಿತ ಕ್ಷಿಪ್ರ ಪರೀಕ್ಷೆಗೆ ಅವಕಾಶ ನೀಡುತ್ತಿವೆ.
ವಿದೇಶಿ ಕಿಟ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕೈಗೆಟುಕುವ ಆರ್‌ಟಿ-ಪಿಸಿಆರ್ ಟೆಸ್ಟ್ ಅನ್ನು ಬಿಡುಗಡೆ ಮಾಡಿದ ಬಳಿಕ, ಕೋವಿಡ್ -19 ಪರೀಕ್ಷೆಯನ್ನು ವೇಗಗೊಳಿಸಲು ನಾವು ಕಾಂಪ್ಯಾಕ್ಟ್ ಎಕ್ಸ್‌ಎಲ್ ಅನ್ನು ಬಿಡುಗಡೆ ಮಾಡಿದೆವು. ಈಗ, ಪ್ರತಿಜನಕ ಪರೀಕ್ಷಾ ಕಿಟ್ ಗೆ ಅನುಮೋದನೆ ದೊರಕಿದೆ ಎಂದು ರಾವಲ್ ಹೇಳಿದರು.








