INS Vikrant ನಲ್ಲಿ ಮೊದಲ ಜೆಟ್ ಲ್ಯಾಂಡಿಂಗ್…. ಐತಿಹಾಸಿಕ ಎಂದ ಭಾರತೀಯ ಯುದ್ಧ ನೌಕೆ…
ನೂತನ ವಿಮಾನವಾಹಕ ನೌಕೆ INS ವಿಕ್ರಾಂತ್ ಫ್ಲೈಟ್ ಡೆಕ್‌ನಲ್ಲಿ Fixed Wing ವಿಮಾನವನ್ನ ಮೊದಲ ಬಾರಿಗೆ ಇಳಿಸುವುದರ ಮೂಲಕ ಭಾರತ ಹೊಸ ಮೈಲಿಗಲ್ಲನ್ನ ದಾಟಿದೆ. ಭಾರತದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ನ ನೌಕಾ ಆವೃತ್ತಿ ಸಮುದ್ರ ಪ್ರಯೋಗಗಳ ಭಾಗವಾಗಿ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಯಶಸ್ವಿಯಾಗಿ ಇಳಿಯಿದೆ.
ಭಾರತೀಯ ನೌಕಾಪಡೆಯು ಆತ್ಮ ನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ಕಡೆಗೆ ಸಾಧಿಸಿದ ಐತಿಹಾಸಿಕ ಮೈಲಿಗಲ್ಲು ಇದಾಗಿದೆ. ₹ 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ತೂಕದ ಐಎನ್‌ಎಸ್ ವಿಕ್ರಾಂತ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲದ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ.
ಇದು MiG-29K ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 30 ವಿಮಾನಗಳನ್ನು ಸಾಗಿಸಬಲ್ಲದು. ಯುದ್ಧನೌಕೆಯು ಸುಮಾರು 1,600 ಸಿಬ್ಬಂದಿಗೆ ಅವಕಾಶ ಕಲ್ಪಿಸುತ್ತದೆ.
First jet landing on INS Vikrant…. Indian warship as historic…








