ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ತಮ್ಮ ಮಗುವಿನ ಚಿಕಿತ್ಸೆಗಾಗಿ ಆಗಮಿಸಿದ ಕುಟುಂಬದ ಸಂಪರ್ಕದಿಂದ ಭಟ್ಕಳದ 12 ಮಂದಿಗೆ ಕೊರೋನಾ ಹರಡಿರುವುದು ತಿಳಿದು ಬಂದಿದೆ.
ಏಕಾಏಕಿ 12 ಪ್ರಕರಣ ಪತ್ತೆಯಾಗುವ ಮೂಲಕ ಉತ್ತರ ಕನ್ನಡದ ಭಟ್ಕಳ ಕೊರೊನಾ ಹಾಟ್ ಸ್ಪಾಟ್ ಆಗುವ ಎಲ್ಲಾ ಲಕ್ಷಣ ಗೋಚರಿಸಿದೆ. ಅಷ್ಟೇ ಅಲ್ಲ ಈ ಮೂಲಕ ಫಸ್ಟ್ ನ್ಯೂರೋ ಆಸ್ಪತ್ರೆ ಹೊರ ಜಿಲ್ಲೆಗೂ ಕೊರೊನಾ ಹರಡುವುದಕ್ಕೆ ಕಾರಣವಾಗಿದೆ.
ಎಪ್ರಿಲ್ 15ರಂದು ತಮ್ಮ 5 ತಿಂಗಳ ಮಗುವಿನ ಚಿಕಿತ್ಸೆಗಾಗಿ ಆಗಮಿಸಿದ ಕುಟುಂಬ ಎಪ್ರಿಲ್ 20 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಭಟ್ಕಳಕ್ಕೆ ವಾಪಸಾಗಿದ್ದರು. ನಂತರ ಮಗುವಿನ ತಾಯಿಯ ತಂಗಿಗೆ ಆಗಾಗ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಯಿತು. ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ವಿದೇಶ ಪ್ರವಾಸ ಕೈಗೊಳ್ಳದ ಹಾಗೂ ವಿದೇಶದಿಂದ ಬಂದವರ ಸಂಪರ್ಕಕ್ಕೆ ಒಳಗಾಗದ ಆಕೆಗೆ ಸೋಂಕು ತಗುಲಿದ್ದು ಹೇಗೆ ಎಂದು ತಲೆಕೆಡಿಸಿಕೊಂಡ ಜಿಲ್ಲಾಡಳಿತ ಈ ಕುರಿತು ತನಿಖೆ ನಡೆಸಿತು. ಆ ಸಮಯದಲ್ಲಿ ಆಕೆಯ ಅಕ್ಕ ಮತ್ತು ಭಾವ, ತಮ್ಮ ಹಸುಗೂಸಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂದಿದ್ದ ಅಂಶ ಬೆಳಕಿಗೆ ಬಂದಿತ್ತು.
ಹೀಗಾಗಿ ಉತ್ತರ ಕನ್ನಡದ ಜಿಲ್ಲಾಡಳಿತ ಆಕೆಯ ಕುಟುಂಬವನ್ನು ಕ್ವಾರಂಟೈನ್ ನಲ್ಲಿರಿಸಿ, ಆಕೆಯ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿತು. ಇಂದು ರಾಜ್ಯ ಆರೋಗ್ಯ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿರುವ ಪರೀಕ್ಷಾ ವರದಿಯಲ್ಲಿ 5 ತಿಂಗಳ ಮಗು ಮತ್ತು 11 ವರ್ಷದ ಮಗು ಸೇರಿದಂತೆ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರೊಂದಿಗೆ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಹೊರ ಜಿಲ್ಲೆಗೂ ಕೊರೊನಾ ಸೋಂಕು ಹರಡಿರುವುದು ಖಚಿತವಾಗಿದೆ.
ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!
ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...








