ಶಾಲೆಯಲ್ಲಿ ವಿಷಯ ಆಹಾರ ಸೇವಿಸಿದ ಪರಿಣಾಮ ಐವರು ಮಕ್ಕಳು ಸಾವನ್ನಪ್ಪಿ, 38 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದಲ್ಲಿನ ಯುಗಪುರುಷ ಧಾಮ್ ಬೌದ್ಧಿಕ ವಿಕಾಸ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕೇಂದ್ರದಲ್ಲಿ ತಯಾರಿಸಿದ ಊಟ ವಿಷಪೂರಿತ ಆಹಾರ ಸೇವಿಸಿದ್ದ ಐದು ಮಕ್ಕಳು ಸಾವನ್ನಪ್ಪಿದ್ದು, 38 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಮಕ್ಕಳ ಪೈಕಿ ನಾಲ್ವರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ನಾಲ್ವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಮುಂದಿನ 48 ಗಂಟೆಗಳ ಕಾಲ ಶಾಲೆಯಲ್ಲಿ ಯಾವುದೇ ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ಆಶ್ರಮದ ಮೇಲೆ ನಿಗಾ ಇಡುತ್ತೇವೆ ಎಂದು ಜಿಲ್ಲಾಧಿಕಾರಿ ಆಶೀಶ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ತನಿಖಾ ಸಮಿತಿ ರಚಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸಚಿವರಾದ ಕೈಲಾಶ್ ವಿಜಯವರ್ಗಿಯ ಮತ್ತು ತುಳಸಿ ಸಿಲಾವತ್ ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಭೇಟಿ ಮಾಡಿದರು. ನಾವು ಜೀವನಮಟ್ಟವನ್ನು ಉನ್ನತೀಕರಿಸುತ್ತೇವೆ ಮತ್ತು ಅಲ್ಲಿನ ಆಹಾರದ ಗುಣಮಟ್ಟ ಸುಧಾರಿಸುತ್ತೇವೆ ಎಂದು ಹೇಳಿದ್ದಾರೆ. ಈ ಆಶ್ರಮದಲ್ಲಿ 200 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಐದರಿಂದ 15 ವರ್ಷದೊಳಗಿನ ಮಕ್ಕಳು ಅಲ್ಲಿದ್ದಾರೆ.