ಮAಗಳೂರು: ದಕ್ಷಿಣ ದ.ಕ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಅಂಗಡಿಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಐದು ದಿನಗಳ ಕಾಲ ಜಿಲ್ಲೆಯ ಜ್ಯುವೆಲ್ಲರಿ ಅಂಗಡಿಗಳನ್ನು ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ತೀರ್ಮಾನಿಸಿದೆ. ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿ ಎಲ್ಲವೂ ಜುಲೈ 5 ರಿಂದ ಜುಲೈ 9ರವರೆಗೆ ಜ್ಯುವೆಲ್ಲರಿಗಳು ಬಂದ್ ಆಗಲಿವೆ
ಚಿನ್ನಾಭರಣ ಖರೀದಿಗೆ ಕಾಯ್ದಿರಿಸಿದವರು ಇಂದು(ಶನಿವಾರ) ಮಳಿಗೆಗೆ ಆಗಮಿಸಿ ಪಡೆದುಕೊಂಡು ಹೋಗಲು ಸೂಚನೆ ನೀಡಲಾಗಿದೆ.
ನಿನ್ನೆ ಒಂದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನ 97 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆಭರಣ ಅಂಗಡಿಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಅಪರಿಚಿತರ ಕೈಗೆ ATM’ ಕಾರ್ಡ್ ಕೊಡುವ ಮುನ್ನ ಈ ಸ್ಟೋರಿ ಓದಿ
ಹಾಸನ:ಮಹಿಳೆಯೊಬ್ಬರು ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ₹50 ಸಾವಿರ ಕಳೆದುಕೊಂಡ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಬೇಲೂರು ತಾಲೂಕಿನ ಅರೇಹಳ್ಳಿಯ ಮಹಿಳೆ ಪದ್ಮ ಹಣ ಕಳೆದುಕೊಂಡವರು...