ಐಪಿಎಲ್ 2020 – ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ
ಕೆಕೆಆರ್ ಹೀನಾಯವಾಗಿ ಆರ್ ಸಿಬಿಗೆ ತಲೆಬಾಗಿದೆ. ಹಾಗಂತ ಇದ್ರಲ್ಲಿ ಅಚ್ಚರಿಪಡಬೇಕಾಗಿಲ್ಲ.
ಯಾಕಂದ್ರೆ ಮೂರು ವರ್ಷಗಳ ಹಿಂದೆ ಕೆಕೆಆರ್ ವಿರುದ್ಧ ಆರ್ ಸಿಬಿ ಇದಕ್ಕಿಂತ ಹೀನಾಯವಾಗಿ ಸೋತಿತ್ತು.
ಇದಕ್ಕೆ ಈಗ ಆರ್ ಸಿಬಿ ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಮಹಮ್ಮದ್ ಸಿರಾಜ್ ಮಾರಕ ದಾಳಿ ಮೂರು ವರ್ಷಗಳ
ಹಿಂದೆ ನಥನ್ ಕಲ್ಟರ್ ನೆಲ್ ಮತ್ತು ಕ್ರಿಸ್ ವೋಕ್ಸ್ ಕೂಡ ಇದೇ ರೀತಿಯ ಪ್ರದರ್ಶನ ನೀಡಿದ್ದರು.
ನಥಾನ್ ಕಲ್ಟರ್ ನೆಲೆ ಅವರು 21ಕ್ಕೆ ಮೂರು ವಿಕೆಟ್ ಉರುಳಿಸಿದ್ರೆ, ಕ್ರಿಸ್ ವೋಕ್ಸ್ ಅವರು ಆರು ರನ್ ಗೆ ಮೂರು ವಿಕೆಟ್ ಕಬಳಿಸಿದ್ದರು.
ಈ ಪಂದ್ಯದಲ್ಲಿ ಕೆಕೆಆರ್ ತಂಡ 132 ರನ್ ಗಳಿಸಿತ್ತು. ಈ ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿ ತಂಡ 9.4 ಓವರ್ ಗಳಲ್ಲಿ 49 ರನ್ ಗೆ ಆಲೌಟ್ ಆಗಿತ್ತು.
ಇನ್ನು ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದ್ರು. ಎಬಿಡಿ ವಿಲಿಯರ್ಸ್ 8 ರನ್ ಗಳಿಸಿದ್ರೆ, ಕ್ರಿಸ್ ಗೇಲ್ 7 ರನ್ ಗಳಿಸಿದ್ದರು.
ಆರ್ ಸಿಬಿ ಪರ ಕೇದಾರ್ ಜಾಧವ್ ಅವರು 9 ರನ್ ಗಳಿಸಿದ್ದೇ ಆರ್ ಸಿಬಿಯ ಗರಿಷ್ಠ ರನ್.
ಇನ್ನು 2009ರ ಐಪಿಎಲ್ ನಲ್ಲಿ ಆರ್ ಸಿಬಿ ತಂಡ ರಾಜಸ್ತಾನ ರಾಯಲ್ಸ್ ತಂಡವನ್ನು 15.1 ಓವರ್ ಗಳಲ್ಲಿ 58 ರನ್ ಗೆ ಆಲೌಟ್ ಮಾಡಿತ್ತು.
ಅನಿಲ್ ಕುಂಬ್ಳೆ 3.1 ಓವರ್ ಗಳಲ್ಲಿ ಐದು ರನ್ ನೀಡಿ ಐದು ವಿಕೆಟ್ ಉರುಳಿಸಿದ್ದರು. ಆರ್ ಸಿಬಿ ತಂಡ ಈ ಪಂದ್ಯದಲ್ಲಿ 8 ವಿಕೆಟ್ ಗೆ 131 ರನ್ ದಾಖಲಿಸಿತ್ತು.
2017ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು 66 ರನ್ ಗೆ ಆಲೌಟ್ ಮಾಡಿತ್ತು.
ಮುಂಬೈ ಇಂಡಿಯನ್ಸ್ 212 ರನ್ ಗಳಿಸಿತ್ತು. ಹರ್ಭಜನ್ ಸಿಂಗ್ ಅವರು 3 ವಿಕೆಟ್ ಉರುಳಿಸಿದ್ದರು.
2008ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡ 67 ರನ್ ಗೆ ಸರ್ವಪತನಗೊಂಡಿತ್ತು.
ಹಾಗೇ 2017ರ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 67 ರನ್ ಆಲೌಟಾಗಿತ್ತು.








