ಮಿಂಚಿನ ಹೊಡೆತಕ್ಕೆ ಐವರು ಬಲಿ.. 18 ಮಂದಿ ಗಾಯ
ಭೋಪಾಲ್ : ಸಿಡಿಲು ಬಡಿದು ಐವರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಪೆನ್ನಾ ಜಿಲ್ಲೆಯ ವಿವಿಧ ಕಡೆ ನಡೆದಿದೆ.
ಸಿಡಿಲಿನ ಹೊಡೆತಕ್ಕೆ ಪೆನ್ನಾ ಜಿಲ್ಲೆಯ ಉರೆಹಾ, ಪಿಪರಿಯಾ ದೌನ್, ಚೌಮುಖ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮತ್ತೊಬ್ಬರು ಸಾವು- ಬದುಕಿನ ನಡುವೆ ಹೋರಾಡಿ ಮೃತಪಟ್ಟಿದ್ದಾರೆ.
ಚೌಮುಖದಲ್ಲಿ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ರಚನಾ ಶರ್ಮಾ ಎಂದು ಹೇಳಲಾಗುತ್ತಿದೆ.
ಅಲ್ಲದೇ ಈ ಮೂರು ಗ್ರಾಮದಲ್ಲಿ ಮಿಂಚಿನ ಹೊಡೆತಕ್ಕೆ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.
ಜೊತೆಗೆ ಉರೆಹಾ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡ 11 ಮಂದಿಯನ್ನು ಪೆನ್ನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.









