ಶ್ರೀನಗರ: ಚಳಿ ತಡೆಯದೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶ್ರೀನಗರ (Srinagar) ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ (Pandrathan Area) ಈ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಮೂಲತಃ ಬಾರಾಮುಲ್ಲಾ ಜಿಲ್ಲೆಯವರು ಎನ್ನಲಾಗಿದ್ದು, ದಂಪತಿ ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಬಾರಮುಲ್ಲಾ ಜಿಲ್ಲೆಯಿಂದ ಬಂದಿದ್ದ ಕುಟುಂಬ ಪಂದ್ರಾಥಾನ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಜಿಲ್ಲೆಯಲ್ಲಿರುವ ಚಳಿಯ ಪರಿಣಾಮದಿಂದ ಉಸಿರುಗಟ್ಟಿದ್ದು, ಪ್ರಜ್ಞಾಹೀನರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದುಃಖ ವ್ಯಕ್ತಪಡಿಸಿದ್ದು, ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.