ಪಂಚರಾಜ್ಯ ಚುನಾವಣೆಯ ಪಲಿತಾಂಶ | 4ರಲ್ಲಿ ಬಿಜೆಪಿ, 1 ಆಪ್ ಜಯ – Saaksha Tv
ಪಂಚರಾಜ್ಯ ಚುನಾವಣೆ : ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟಗೊಂಡಿದೆ.
ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ 4 ರಲ್ಲಿ ಬಿಜೆಪಿ ಗೆದ್ದಿದ್ದು, 1 ರಲ್ಲಿ ಆಮ್ ಆದ್ಮಿ ಪಾರ್ಟಿ ಗೆದ್ದಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, ಪಂಜಾಬ್ ನಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದೆ.
ಉತ್ತರ ಪ್ರದೇಶ: ಬಿಜೆಪಿ 273, ಸಮಾಜವಾದಿ ಪಕ್ಷ 125, ಬಿಎಸ್ ಪಿ 1 ಕಾಂಗ್ರೆಸ್ 2, ಇತರೆ 2 ಸ್ಥಾನದಲ್ಲಿ ಗೆಲವು ಸಾಧಿಸಿದೆ. ಯುಪಿಯಲ್ಲಿ ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 202 ಇದ್ದು ಯೋಗಿ ಆದಿತ್ಯನಾಥ ಸಾರಥ್ಯದ ಬಿಜೆಪಿ ಸರಕಾರ ರಚನೆ ಮಾಡಲಿದೆ.
ಉತ್ತರಾಖಂಡ: ಬಿಜೆಪಿ 48, ಕಾಂಗ್ರೆಸ್ 18, ಆಪ್ 0, ಇತರೆ 4 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಇಲ್ಲಿ ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 36 ಇದ್ದು ಬಿಜೆಪಿ ಸರಳ ಬಹುಮತದೊಂದೆಗೆ ಸರಕಾರ ರಚನೆ ಮಾಡುತ್ತದೆ.
ಗೋವಾ: ಬಿಜೆಪಿ 20, ಕಾಂಗ್ರೆಸ್ 12, ಆಪ್ 2, ಇತರೆ 6 ಸ್ಥಾನದಲ್ಲಿ ವಿಜಯಪತಾಕೆ ಹಾರಿಸಿದೆ. ಇಲ್ಲಿ ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 21 ಇದ್ದು, ಬಿಜೆಪಿ ಸರಕಾರ ರಚಿಸಲು 1 ಸ್ಥಾನ ಕೊರೆತೆ ಇದೆ. ಬಿಜೆಪಿ ಜೊತೆ 3 ಜನ ಪಕ್ಷೇತರ ಅಭ್ಯರ್ಥಿಗಳು ಕೈ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಮಣಿಪುರ: ಬಿಜೆಪಿ 29, ಕಾಂಗ್ರೆಸ್ 10, ಇತರೆ 15 ಸ್ಥಾನದಲ್ಲಿ ಗೆಲವು ದಾಖಲಿಸಿದ್ದು ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 31 ಇದೆ. ಈ ಹಿನ್ನಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಯಾವ ರಾಜಕೀಯ ರಣತಂತ್ರ ರೂಪಿಸುತ್ತೆ ಕಾದು ನೋಡಬೇಕಿದೆ.
ಪಂಜಾಬ್ : ಎಎಪಿ 92, ಕಾಂಗ್ರೆಸ್ 18, ಬಿಜೆಪಿ 2, ಎಸ್ ಎ ಡಿ 4, ಇತರೆ 1 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದು, ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 61 ಇದ್ದು, ಇಲ್ಲಿ ಆಮ್ ಆದ್ಮಿ ಪಾರ್ಟಿ ಯಾರು ಊಹಿಸದಂತಹ ಬಹುಮತ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿಗಳನ್ನು ಕ್ಲೀನ್ ಸ್ವಿಪ್ ಮಾಡುವ ಮುಖಾಂತರ ಸರಳ ಬಹುಮತ ಮುಖಾಂತರ ಸರಕಾರ ರಚಿಸುತ್ತಾರೆ.








