ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಐವರು ಯುವಕರು ನೀರು ಪಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹಿರೇಕೆರೆಯಲ್ಲಿ ನಡೆದಿದೆ.
ನೀರುಪಾಲಾದವರನ್ನು ರಘು (22), ದಿಲೀಪ್ (24), ಸಂದೀಪ್ (23), ದೀಪಕ್ (25) ಸುದೀಪ್ (22) ಎಂದು ಗುರುತಿಸಲಾಗಿದೆ. ಐವರು ಯುವಕರಲ್ಲಿ ಇಬ್ಬರು ಸ್ಥಳಿಯ ನಿವಾಸಿಗಳು, ಉಳಿದ ಮೂವರು ಬೀಗರ ಊಟಕ್ಕೆ ಬಂದವರು.

ಬೀಗರ ಊಟಕ್ಕೆಂದು ಬಂದಿದ್ದಾಗ ಗ್ರಾಮದ ಹಿರೇಕೆರೆಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಸ್ಥಳ್ಕೆ ಬಂದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ ಬಳಸಿ ಸೂಚಿಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಶವಗಳನ್ನು ಹೊರಗೆ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








