ಒಲಿಂಪಿಕ್ ಅರ್ಹತಾ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯು ಡಿಸೆಂಬರ್ 8ರಿಂದ 13ರವರೆಗೆ ನಡೆಯಲಿದೆ ಎಂದು ಬಿಡಬ್ಲ್ಯುಎಫ್ ಸ್ಪಷ್ಟಪಡಿಸಿದೆ. ಈ ಹಿಂದಿನ ವೇಳಾಪಟ್ಟಿಯಂತೆ ನವದೆಹಲಿಯಲ್ಲಿ ಮಾರ್ಚ್ 24ರಿಂದ 29ರವರೆಗೆ ನಡೆಯಬೇಕಿತ್ತು. ಆದ್ರೆ ಕೊರೋನಾ ವೈರಸ್‍ನಿಂದಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಇನ್ನುಳಿದಂತೆ ಹೈದ್ರಬಾದ್ ಓಪನ್ ಆಗಸ್ಟ್ 11ರಿಂದ 16ರವರೆಗೆ ಹಾಗೂ ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿ ನವೆಂಬರ್ 17ರಿಂದ 22ರವರೆಗೆ ನಡೆಯಲಿದೆ. ಈ ನಡುವೆ, ನ್ಯೂಜಿಲೆಂಡ್ ಓಪನ್, ಮಲೇಶಿಯನ್ ಓಪನ್ ಹಾಗೂ ಥಾಯ್ಲೆಂಡ್ ಓಪನ್ ಸೇರಿದಂತೆ ಒಟ್ಟು ಎಂಟು ಟೂರ್ನಿಗಳಿಗೆ ಹೊಸ ವೇಳಾಪಟ್ಟಿಯನ್ನು ನಿಗದಿಪಡಿಸಲಾಗುವುದು. ಆದ್ರೆ ಕೊರೊನಾ ವೈರಸ್‍ನಿಂದಾಗಿ ಯಾವ ಟೂರ್ನಿಯನ್ನು ಕೂಡ ಸಂಘಸಿಸುವುದು ಅಷ್ಟೊಂದು ಸುಲಭವಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು ಟೂರ್ನಿಯನ್ನು ಸಂಘಟಿಸಲು ಬಿಡಬ್ಲ್ಯುಎಫ್ ನಿರ್ಧಾರ ಮಾಡಲಿದೆ.








