OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!
ಅಮೇರಿಕಾದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಪ್ಲೈಯಿಂಗ್ ಕಾರನ್ನು ಅನುಮೋದಿಸಿದೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದ್ದು, ಫ್ಲೈಯಿಂಗ್ ಕಾರ್ ನತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ.
100 ಎಮ್ ಪಿ ಎಚ್ ವೇಗದಲ್ಲಿ 10000 ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲ ಟೆರ್ರಾಫುಜಿಯಾ ಟ್ರಾನ್ಸಿಶನ್, ಫೆಡರಲ್ ಏಜೆನ್ಸಿಯಿಂದ ವಿಶೇಷ ಲೈಟ್-ಸ್ಪೋರ್ಟ್ ಏರ್ ಕ್ರಾಫ್ಟ್, ವಾಯು ಅರ್ಹತೆ(airworthiness) ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಇದು ಮುಖ್ಯವಾಗಿ ಟೇಕ್ ಆಫ್ ಗೆ ಗ್ರೀನ್ ಸಿಗ್ನಲ್ ನೀಡಿದೆ.
ರೆನಾಲ್ಟ್ ಇಂಡಿಯಾ ಕಿಗರ್ SUV ಬಿಡುಗಡೆ: ವಿಶೇಷತೆಗಳು..!
ಟ್ರಾನ್ಸಿಶನ್ ನಲ್ಲಿ ಚಾಲಕ, ಒಂದು ನಿಮಿಷದೊಳಗೆ ಪ್ಲೈಯಿಂಗ್ ಮೋಡ್ ಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗುವಂತಹ ಸೌಲಭ್ಯವನ್ನು ಹೊಂದಿದ್ದು, ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಈ ತಂತ್ರಜ್ಞಾನ ಯೋಗ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಲ್ಯಾಂಡ್ ಮಾಡಲು ವಿಶೇಷ ನಿಲ್ದಾಣಗಳೇನು ಬೇಕಾಗಿಲ್ಲ, ರಸ್ತೆಯಲ್ಲೇ ಯಾವುದೇ ಸಮಯದಲ್ಲೂ ಬೇಕಾದರೂ ನಿಲ್ಲಿಸಬಹುದಾಗಿದೆ.
ಈ ಪ್ಲೈಯಿಂಗ್ ಕಾರು 27-ಅಡಿ ರೆಕ್ಕೆಗಳನ್ನು ಹೊಂದಿದ್ದು, ಅದು ಸಣ್ಣ ಗಾತ್ರಕ್ಕೆ ಮಡಚಿಕೊಳ್ಳುತ್ತದೆ. ಪ್ಲೇನ್ ಎಂಜಿನ್ ಪ್ರೀಮಿಯಂ ಗ್ಯಾಸೋಲಿನ್ ಅಥವಾ 100 ಎಲ್ ಎಲ್ ಏರೋಪ್ಲೇನ್ ಇಂಧನದಲ್ಲಿ ಚಲಿಸಬಲ್ಲದು, ಆದರೆ ಕಾರನ್ನು ಹೈಬ್ರಿಡ್-ಎಲೆಕ್ಟ್ರಿಕ್ ಮೋಟರ್ ನ ಸಹಾಯದಿಂದ ಚಲಾಯಿಸಬೇಕಾಗುತ್ತದೆ.
ಭಾರತದಲ್ಲಿ ಇಂದಿನಿಂದ ‘BMW X3 xDrive30i SportX’ ಮಾರಾಟಕ್ಕೆ ಲಭ್ಯ…!
ವಾಹನದ ಪ್ರಮಾಣಿತ ಲಕ್ಷಣಗಳು ನಾಲ್ಕು ಚಕ್ರಗಳ ಹೈಡ್ರಾಲಿಕ್ ಡಿಸ್ಕ್ ಬ್ರೇಕ್, ಕಟ್ಟುನಿಟ್ಟಾದ ಕಾರ್ಬನ್ ಫೈಬರ್ ಸುರಕ್ಷತಾ ಪಂಜರ ಮತ್ತು ಏರ್ಫ್ರೇಮ್ ಧುಮುಕುಕೊಡೆ. ಇದು ಸರಿಸುಮಾರು 1,300 ಪೌಂಡ್ (590 ಕೆಜಿ) ತೂಕದಿಂದ ಕೂಡಿದೆ. ಪ್ರಸ್ತುತ, ಈ ಫ್ಲೈಯಿಂಗ್ ಕಾರನ್ನು ಪೈಲಟ್ ಗಳು ಮತ್ತು ಫ್ಲೈಟ್ ಸ್ಕೂಲ್ ಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿದೆ. ಆದರೂ ಅದರ ಕಾರಿನ ಘಟಕಗಳು ‘ಸ್ಟ್ರೀಟ್ ಲೀಗಲ್’ ಆಗಲು ಇನ್ನೊಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.








