ಮುಂದಿನ ಎರಡು ತಿಂಗಳು ಕೊರೊನಾ ಅಬ್ಬರ ಹೆಚ್ಚು..!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕಂಟ್ರೋಲ್ ತಪ್ಪಿರೋದು ದಾಖಲಾಗುತ್ತಿರುವ ಪ್ರಕರಣಗಳಿಂದ ಗೊತ್ತಾಗುತ್ತಿದೆ.
ನಿನ್ನೆ ರಾಜ್ಯದಲ್ಲಿ ಬರೋಬ್ಬರಿ 4 ಸಾವಿರ ಕೇಸ್ ಗಳು ದಾಖಲಾಗಿದ್ದು, ಕೊರೊನಾ ಕಂಟ್ರೋಲ್ ಗೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ.
ಈ ಮಧ್ಯೆ ಸರ್ಕಾರದ ಈ ರೂಲ್ಸ್ ಗೆ ಚಿತ್ರರಂಗ, ಜಿಮ್ ಮಾಲೀಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಆರೋಗ್ಯ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡು, ಸಾರ್ವಜನಿಕರು ಕಡ್ಡಾಯವಾಗಿ ಕೊರೊನಾ ನಿಯಮಗಳ ಪಾಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ಕೊರೊನಾ ಎರಡನೇ ಅಲೆಯ ಹೊಸ್ತಿಲಿನಲ್ಲಿ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿತ್ತು.
ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಈ ಎರಡು ತಿಂಗಳು ಯಾವುದೇ ಕ್ರಮ ತೆಗೆದುಕೊಳ್ಳದಿದ್ರೆ ಸರ್ಕಾರ ಜವಾಬ್ದಾರಿ ಆಗಬೇಕಾಗುತ್ತದೆ.
ಇನ್ನೆರಡು ತಿಂಗಳು ಈ ಅಲೆಯ ತೀವ್ರತೆ ರಾಜ್ಯದಲ್ಲಿರಲಿದ್ದು, ಮೇ ಅಂತ್ಯಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ಹಾಗಾಗಿ ಮಕ್ಕಳು ಸೇರಿದಂತೆ ಜನರ ರಕ್ಷಣೆ ಸರ್ಕಾರದ ಕೆಲಸ.
ಸಿಎಂ, ಮಂತ್ರಿಗಳು, ತಜ್ಞರು ಜೊತೆ ಚರ್ಚಿಸಿ ಸಲಹಾ ಸಮಿತಿಗಳ ವರದಿ ಆಧರಿಸಿ ಈ ಕಠಿಣ ನಿಯಮ ತರಲಾಗಿದೆ ಎಂದು ತಿಳಿಸಿದ್ದಾರೆ.










