ಉತ್ತಮ ಆರೋಗ್ಯಕ್ಕೆ ಮತ್ತು ನಿಮ್ಮವರ ಹಿತಕ್ಕಾಗಿ ನೊಣಗಳನ್ನು ಮನೆಯಿಂದ ಹೊರಗಿಡುವ ಕೆಲವು ವಿಧಾನಗಳು ನಿಮಗಾಗಿ…
ಒಂದು ಲೋಟಕ್ಕೆ ಆಪಲ್ ಸೈಡರ್ ವಿನೇಗರ್ ಹಾಗೂ ಒಂದು ಡ್ರಾಪ್ ನಷ್ಟು ಡಿಶ್ ಸೋಪ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮೇಲಿನಿಂದ ಲೋಟಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು ಮುಚ್ಚಿ ಬಿಗಿಯಾಗಿ ಕಟ್ಟಿ,ಆ ಬಳಿಕ ಮೇಲ್ಭಾಗದಲ್ಲಿ ಸಣ್ಣ ರಂಧ್ರಗಳನ್ನು ಮಾಡಿಟ್ಟರೆ ಇದರ ಪರಿಮಳಕ್ಕೆ ನೊಣಗಳು ಓಡಿ ಹೋಗುತ್ತವೆ.
ಉಪ್ಪು ನೀರಿನ ಸ್ಪ್ರೇ:
ಸಿದ್ಧತೆ: ಒಂದು ಸ್ಪ್ರೇ ಬಾಟಲಿಗೆ ನೀರನ್ನು ತುಂಬಿ, ಅದಕ್ಕೆ ಉಪ್ಪು ಸೇರಿಸಿ.
ಸಿಂಪಡನೆ: ಈ ಉಪ್ಪು ನೀರನ್ನು ಮನೆಯ ಎಲ್ಲಾ ಮೂಲೆಗಳಲ್ಲಿ ಸಿಂಪಡಿಸಿ. ಇದು ನೊಣಗಳ ಹಾರಾಟ ತಡೆಯಲು ಸಹಾಯ ಮಾಡುತ್ತದೆ
ಪುದಿನಾ ಗಿಡಗಳ ಬಳಕೆ:
ಬೆಳೆಸುವುದು: ಮನೆಯ ಆವರಣದಲ್ಲಿ ಪುದಿನಾ ಗಿಡಗಳನ್ನು ಬೆಳೆಸಿರಿ.
ಪುದಿನಾ ನೀರಿನ ಸಿಂಪಡನೆ: ಪುದಿನಾ ಎಲೆಗಳನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಮನೆಯೊಳಗೆ ಸಿಂಪಡಿಸಿ. ಪುದಿನಾ ಎಣ್ಣೆಯನ್ನು ಸಹ ಬಳಸಬಹುದು.
ನಿಂಬೆ ಮತ್ತು ಲವಂಗ:
ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಅದರ ಮೇಲೆ ಲವಂಗದ ಪುಡಿಯನ್ನು ಉದುರಿಸಿ.
ಈ ನಿಂಬೆ-ಲವಂಗ ಮಿಶ್ರಣವನ್ನು ಬಾಗಿಲು ಮತ್ತು ಕಿಟಕಿಯ ಬಳಿ ಇರಿಸಿ. ಈ ವಾಸನೆಯು ನೊಣಗಳನ್ನು ತಡೆಯುತ್ತದೆ.